ಶುಕ್ರವಾರ, ಅಕ್ಟೋಬರ್ 18, 2019
27 °C

ಪದ್ಮನಾಭನ ನಿಧಿ: ವಿಶ್ವಮಟ್ಟದ ನಿಯಮಾವಳಿಯಂತೆ ದಾಖಲೆ

Published:
Updated:

 ತಿರುವನಂತಪುರ, ಕೇರಳ (ಪಿಟಿಐ): ಇಲ್ಲಿನ ಪ್ರಸಿದ್ಧ ಶ್ರೀ ಅನಂತ ಪದ್ಮನಾಭಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿ ದೊರೆತಿರುವ ಅಪಾರ ಮೌಲ್ಯದ ನಿಧಿಯನ್ನು ವೈಜ್ಞಾನಿಕವಾಗಿ ದಾಖಲಿಸಲು ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿಯು, ಅಂತರ್ ರಾಷ್ಟ್ರೀಯ ವಸ್ತುಸಂಗ್ರಹಾಲಯ(ಇಂಟರ್ ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಂ) ಮಂಡಳಿಯು ಸಿದ್ಧಪಡಿಸಿರುವ ವಿಶ್ವಮಟ್ಟದ ನಿಯಮಾವಳಿಯಂತೆ ದಾಖಲಿಸಲಿದೆ.

~ದೇವಾಲಯದ ಸಂಪತ್ತನ್ನು ದಾಖಲಿಸುವಲ್ಲಿ ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಇದರೊಂದಿಗೆ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ  ಮಂಡಳಿಯ(ಐ ಸಿ ಎಂ) ನಿಯಮಗಳನ್ನು ಪಾಲಿಸುತ್ತೇವೆ ಎಂದು ಸಮಿತಿಯ ಸಹಾಯಕ ಸಮನ್ವಯಕಾರ ಹಾಗೂ ಖ್ಯಾತ ಪ್ರಾಚ್ಯವಸ್ತು ಸಂರಕ್ಷಣಾ ತಜ್ಞ ಡಾ. ಎಂ. ವಿ. ನಾಯರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 

ಸಮಿತಿಯ ಮುಖ್ಯಸ್ಥರಾಗಿದ್ದ ರಾಷ್ಟ್ರೀಯ ವಸ್ತುಸಂಗ್ರಹಾಲಯದ ನಿರ್ದೇಶಕ ಸಿ.ವಿ. ಆನಂದ ಬೋಸ್ ಅವರು ಇತ್ತೀಚಿಗೆ ನಿವೃತ್ತರಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಅವರ ಸ್ಥಾನಕ್ಕೆ ನಾಯರ್ ಅವರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ನಾಯರ್ ಅವರ ನೇಮಕ ಮಾಡಿತ್ತು. 

Post Comments (+)