ಪದ್ಮಶ್ರೀ ಕಾಲೇಜು: ಆಸ್ಪತ್ರೆ ನಿರ್ವಹಣೆಯಲ್ಲಿ ಪಿಜಿ ಕೋರ್ಸ್

7

ಪದ್ಮಶ್ರೀ ಕಾಲೇಜು: ಆಸ್ಪತ್ರೆ ನಿರ್ವಹಣೆಯಲ್ಲಿ ಪಿಜಿ ಕೋರ್ಸ್

Published:
Updated:

ಬೆಂಗಳೂರು:  ನಗರದ ನಾಗರಬಾವಿಯಲ್ಲಿರುವ ಪದ್ಮಶ್ರೀ ಸಮೂಹ ಶಿಕ್ಷಣ ಸಂಸ್ಥೆಯ ಪದ್ಮಶ್ರೀ ಆಸ್ಪತ್ರೆ ನಿರ್ವಹಣೆ ಕಾಲೇಜಿನಲ್ಲಿ ಆಸ್ಪತ್ರೆ ನಿರ್ವಹಣೆ ಕುರಿತು ಸ್ನಾತಕೋತ್ತರ ಪದವಿ (ಎಂಎಚ್‌ಎ) ಹಾಗೂ ಪದವಿ (ಬಿಎಚ್‌ಎ) ಕಲಿಕೆಗೆ ಅವಕಾಶ ಇದೆ.ಆಸ್ಪತ್ರೆ ನಿರ್ವಹಣೆಯಲ್ಲಿ ಪದವಿ ಶಿಕ್ಷಣ ನೀಡುತ್ತಿರುವ ರಾಜ್ಯದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ.ಕಾಲೇಜು ರಾಜೀವ್‌ ಗಾಂಧಿ ಆರೋಗ್ಯ ವಿವಿಯ ಸಂಯೋಜನೆಗೆ ಒಳಪಟ್ಟಿದೆ. ಎಂಎಚ್‌ಎ ಶಿಕ್ಷಣ 2004 ರಲ್ಲಿ ಹಾಗೂ ಬಿಎಚ್‌ಎ ಕಾರ್ಯಕ್ರಮ 2009ರಲ್ಲಿ ಆರಂಭಗೊಂಡಿತು. ಬಿಎಚ್‌ಎ ಪದವಿ 3 ವರ್ಷದ್ದಾಗಿದ್ದರೆ, ಎಂಎಚ್‌ಎ ಪದವಿ 2 ವರ್ಷದ್ದು. ಎಂಎಚ್‌ಎ ಪದವಿಗೆ ರಾಜೀವ್ ಗಾಂಧಿ ಆರೋಗ್ಯ ವಿವಿ ಸಂಯೋಜನೆಗೆ ಒಳಪಟ್ಟ ಪದವಿ ಕಾಲೇಜುಗಳಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸ ಬಹುದು. ಕನಿಷ್ಠ ಶೇ 50 ಅಂಕ ಪಡೆದಿ ರಬೇಕು. ಬಿಎಚ್‌ಎ ಪದವಿಗೆ ಪಿಯುಸಿ ಯಲ್ಲಿ ಶೇ 50 ಅಂಕ ಪಡೆದಿರಬೇಕು.‘ದೇಶದಲ್ಲಿ ಆರೋಗ್ಯ ಸೇವಾ ಕ್ಷೇತ್ರ ವ್ಯಾಪಕವಾಗಿ ಪ್ರಗತಿ ಸಾಧಿಸುತ್ತಿದೆ. ಜನರಿಗೆ ವ್ಯವಸ್ಥಿತವಾಗಿ ಆರೋಗ್ಯ ಸೇವೆ ಒದಗಿಸುವುದು ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಆಸ್ಪತ್ರೆ ನಿರ್ವಹಣೆಯಲ್ಲಿ ಇನ್ನಷ್ಟು ವೃತ್ತಿಪರತೆ ತರಬೇಕಿದೆ. ಆಗ ರೋಗಿ ಹಾಗೂ ಆಸ್ಪತ್ರೆ ನಡುವಿನ ಸಂಬಂಧ ಉತ್ತಮಗೊಳ್ಳುತ್ತದೆ. ಪದವಿ ಶಿಕ್ಷಣದಲ್ಲಿ ಯೋಜನೆ, ಉದ್ಯಮ ನಿರ್ವಹಣೆ, ಆರ್ಥಿಕ ನಿರ್ವಹಣೆ, ಸಾರ್ವಜನಿಕ ಸಂಪರ್ಕ, ಮಾನವ ಸಂಪ ನ್ಮೂಲ ನಿರ್ವಹಣೆ, ಆರೋಗ್ಯ ಕಾನೂನು ಹಾಗೂ ನಿಯಂತ್ರಕಗಳು ಮತ್ತಿತರ ವಿಷಯಗಳ ಬಗ್ಗೆ ಕಲಿಸ ಲಾಗುತ್ತದೆ’ ಎಂದು ಪದ್ಮಶ್ರೀ ಸಮೂಹ ಸಂಸ್ಥೆಯ ನಿರ್ದೇಶಕ ರಾಜೇಶ್ ಶೆಣೈ ಹೇಳುತ್ತಾರೆ.‘ವಿದ್ಯಾರ್ಥಿಗಳು ಜಗತ್ತನ್ನು ವಿಶ್ಲೇಷ ಣಾತ್ಮಕವಾಗಿ ಹಾಗೂ ವಿಮರ್ಶಾತ್ಮಕ ವಾಗಿ ಮಾತ್ರವಲ್ಲದೆ ವಿಸ್ತ್ರತ ದೃಷ್ಟಿ ಕೋನದಿಂದ ನೋಡಬೇಕಿದೆ. ಹೊಸ ಆಲೋಚನೆಗಳು, ಜ್ಞಾನ ಹಾಗೂ ಹೊಸ ಬಗೆಯ ಚಿಂತನೆಗೆ ಪ್ರೋತ್ಸಾಹ ನೀಡಲಾಗುವುದು. ಉದ್ಯೋಗ ಸ್ಥಳ ದಲ್ಲಿ ಬಿಕ್ಕಟ್ಟಿನ ನಿರ್ವಹಣೆ ಮಾಡು ವುದು ಹೇಗೆ ಎಂಬ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ’ ಎಂದರು.

ಮಾಹಿತಿಗೆ ಸಂಸ್ಥೆಯ ವೆಬ್‌ಸೈಟ್‌ (www.padmashree.org) ವೀಕ್ಷಿಸ ಬಹುದು.

ದೂರವಾಣಿ ಸಂಖ್ಯೆ: 080–23211099.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry