ಸೋಮವಾರ, ಜೂನ್ 14, 2021
28 °C

ಪದ್ಮಶ್ರೀ ತ್ರಿಪರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದ್ಮಶ್ರೀ ತ್ರಿಪರಿ!

ಇದು `ಪದ್ಮಶ್ರೀ~ಗಳ `ಪರಿ~! ಕಮರ್ಷಿಯಲ್ ಚಿತ್ರವೊಂದರಲ್ಲಿ ಪದ್ಮಶ್ರೀ ಪುರಸ್ಕೃತ ಮೂವರು ಕೆಲಸ ಮಾಡಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಇದು ವಿಶೇಷ ಸಂದರ್ಭವೂ ಹೌದು.ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಸುಧೀರ್ ಅತ್ತಾವರ್ ಅವರ `ಪರಿ~ ಚಿತ್ರದಲ್ಲಿ ಎಂ.ಎಸ್ ಸತ್ಯು, ನಿಮಯ್ ಘೋಷ್, ಉಷಾ ಉತ್ತುಪ್ ಹೀಗೆ ಮೂವರು `ಪದ್ಮಶ್ರೀ~ ಕೆಲಸ ಮಾಡಿದ್ದಾರೆ.ಸಂಪನ್ನ ಮುತಾಲಿಕ್ ಎಂಬುವವರ `ಭಾರದ್ವಾಜ~ ಕಾದಂಬರಿ ಆಧರಿಸಿದ ಈ ಚಿತ್ರದಲ್ಲಿ ಎಂ.ಎಸ್.ಸತ್ಯು ಕಲಾನಿರ್ದೇಶಕರಾಗಿ, ಹಿಂದಿಯ ಹಿರಿಯ ಛಾಯಾಗ್ರಾಹಕ ನಿಮಯ್ ಘೋಷ್, ಸುಧೀರ್ ಅವರ ಮೇಲಿನ ಪ್ರೀತಿಯಿಂದ ಅವರಿಗೆ ಸಾಥ್ ನೀಡಿದ್ದಾರೆ. ಗಾಯಕಿ ಉಷಾ ಉತ್ತುಪ್ ಹಾಡಿರುವುದೇ ಅಲ್ಲದೆ ಚಿತ್ರದಲ್ಲಿ ಬಣ್ಣ ಹಚ್ಚಿರುವುದು ಮತ್ತೊಂದು ವಿಶೇಷ.ಎಂ.ಎಸ್.ಸತ್ಯು ಜೊತೆ ಸುಮಾರು 12 ವರ್ಷ ಕೆಲಸ ಮಾಡಿರುವ ಸುಧೀರ್ ಹೆಸರು ಮಾಡಿದ್ದು ಗೀತರಚನಕಾರರಾಗಿ. `ಸವಾರಿ~ ಚಿತ್ರದ `ಮರಳಿ ಮರೆಯಾಗಿ...~ ಹಾಡು ಅವರಿಗೆ ಹೆಸರು ತಂದುಕೊಟ್ಟಿತು. ಅದು ಅವರ ಲೇಖನಿಯಿಂದ ಹುಟ್ಟಿದ ಮೊದಲ ಹಾಡು ಕೂಡ. ಭಾರದ್ವಾಜ ಕಾದಂಬರಿಯಲ್ಲಿ ಲೈಂಗಿಕತೆಗೆ ಹೆಚ್ಚು ಒತ್ತು ನೀಡಿದ್ದು, ಅದರಲ್ಲಿ ಶೇಕಡಾ 60ರಷ್ಟು ಬದಲಾವಣೆ ಮಾಡಿ ಪರಿಪೂರ್ಣ ಪ್ರೀತಿಯ ವಸ್ತುವನ್ನಾಗಿಸಿ ಚಿತ್ರ ಮಾಡಲಾಗಿದೆ ಎನ್ನುತ್ತಾರೆ ಸುಧೀರ್.ಇದು ಕಮರ್ಷಿಯಲ್ ಚಿತ್ರ. ಆದರೆ ಅದನ್ನು ವಿಭಿನ್ನವಾಗಿ ಜನರ ಮುಂದಿಡುತ್ತಿದ್ದೇವೆ. ಕಲಾತ್ಮಕ ಚಿತ್ರದಲ್ಲಿ ಕಾಣುವ ಅನೇಕ ಅಂಶಗಳನ್ನೂ ಈ ಚಿತ್ರದಲ್ಲಿ ನವಿರಾಗಿ ಬಿಂಬಿಸಿದ್ದೇವೆ. ಜನರಿಗೆ ಇದು ಖಂಡಿತ ಇಷ್ಟವಾಗುತ್ತದೆ ಎಂಬುದು ಅವರ ಭರವಸೆ.

ಹಲವು ವರ್ಷಗಳ ಹಿಂದೆಯೇ `ತಳಿರು ತೋರಣ~ ಎಂಬ ಚಿತ್ರ ನಿರ್ದೇಶನಕ್ಕೆ ಸುಧೀರ್ ಕೈ ಹಾಕಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರ ಅರ್ಧಕ್ಕೆ ನಿಂತು ಹೋಯಿತು. `ಪರಿ~ ಚಿತ್ರವೂ ಸೆಟ್ಟೇರಿ ಸುಮಾರು ಒಂದೂವರೆ ವರ್ಷವಾಗಿದೆ.

 

ಚಿತ್ರೀಕರಣ ಪೂರ್ಣಗೊಂಡು ಮೊದಲ ಪ್ರತಿಯೂ ಹೊರಬಂದಿದೆ. ಹೊಸಬರಿಗೆ ಚಿತ್ರರಂಗದಲ್ಲಿ ಪ್ರೋತ್ಸಾಹ ಸಿಗುವುದು ಕಷ್ಟ. ಅಂಥದ್ದರಲ್ಲಿ ತಮ್ಮಂಥ ಹೊಸ ನಿರ್ದೇಶಕನ ಚಿತ್ರವನ್ನು ಕೊಳ್ಳಲು ಈಗಾಗಲೇ ಹಂಚಿಕೆದಾರರು ಮುಂದೆ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸುಧೀರ್.ಚಿತ್ರದ ಬಗ್ಗೆ ಸತ್ಯು ಮೆಚ್ಚುಗೆ ಮಾತನ್ನಾಡಿದ್ದಾರೆ. ಮುಂಬೈನಲ್ಲಿ ಚಿತ್ರದ ಪೂರ್ವಭಾವಿ ಪ್ರದರ್ಶನ ಏರ್ಪಡಿಸಲು ಚಿತ್ರತಂಡ ಚಿಂತನೆ ನಡೆಸಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.