ಶುಕ್ರವಾರ, ಮೇ 7, 2021
20 °C

ಪದ್ಮಶ್ರೀ ಪ್ರಶಸ್ತಿ ಸಾವಿರ ರೂ ಮಾತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ : `ಯಕ್ಷಗಾನಕ್ಕೆ ಪದ್ಮಶ್ರೀ ಪ್ರಶಸ್ತಿ ದೊರೆತಿದ್ದು ನನ್ನ ಮೂಲಕ ಬಂದಿದ್ದಲ್ಲ. ಕಲೆ ಹಾಗೂ ಅಭಿಮಾನಿಗಳಿಂದ~ ಎಂದು ಈ ಪ್ರಶಸ್ತಿಗೆ ಭಾಜನರಾಗಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆ ಶನಿವಾರ ಇಲ್ಲಿ ಹೇಳಿದರು.ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.`ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿ ಅಷ್ಟೇ ಅಲ್ಲ ಅತ್ಯಂತ ಶಿಸ್ತುಬದ್ಧವಾಗಿತ್ತು. ಪ್ರಶಸ್ತಿಯ ಜೊತೆಗೆ ಕೊಟ್ಟಿದ್ದು ಕೇವಲ ಒಂದು ಸಾವಿರ ರೂಪಾಯಿ ಗೌರವಧನ ಮಾತ್ರ. ನಾನು ಗೌರವಧನದ ಮೊತ್ತದ ಬಗ್ಗೆ ಹೇಳುತ್ತಿಲ್ಲ. ಆದರೆ ಅನೇಕರು ನನಗೆ ಪ್ರಶಸ್ತಿ ಪ್ರಕಟವಾದಾಗ ದೊಡ್ಡ ಮೊತ್ತದ ಹಣ ಸಿಗುತ್ತದೆ ಎಂದಿದ್ದರು.ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ಗೌರವಧನದ ಮೊತ್ತ ಮುಖ್ಯವಲ್ಲ, ಪ್ರಶಸ್ತಿಯ ಲಾಂಛನವೇ ಪ್ರತಿಷ್ಠೆಯ ಸಂಗತಿ. ಲಾಂಛನವೇ ಘನತೆಯ ವಿಷಯ ಎಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು~ ಎಂದು ಚಿಟ್ಟಾಣಿ ನುಡಿದರು.`ಮನೆಯಿಂದ ಹೊರಟು ಪ್ರಶಸ್ತಿ ಸ್ವೀಕರಿಸಿ ವಾಪಸ್ ಮನೆ ಸೇರುವ ತನಕದ ಎಲ್ಲ ವೆಚ್ಚವನ್ನೂ ಕೇಂದ್ರ ಸರ್ಕಾರವೇ ಭರಿಸಿದೆ. ಆಹಾರ, ವಸತಿ ಸೇರಿದಂತೆ ಖರ್ಚಿನ ವೆಚ್ಚ  94,000 ರೂಪಾಯಿ ಆಗಿದೆಯಂತೆ~ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.