ಪ.ಪಂ. ಅಧ್ಯಕ್ಷರಿಗೆ ಜೀವ ಬೆದರಿಕೆ: ಪೊಲೀಸರಿಗೆ ದೂರು

ಗುರುವಾರ , ಜೂಲೈ 18, 2019
28 °C

ಪ.ಪಂ. ಅಧ್ಯಕ್ಷರಿಗೆ ಜೀವ ಬೆದರಿಕೆ: ಪೊಲೀಸರಿಗೆ ದೂರು

Published:
Updated:

ಜಗಳೂರು: ಪಟ್ಟಣದಲ್ಲಿ ್ಙ 90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ತರಕಾರಿ ಮಳಿಗೆಗಳನ್ನು ಬಹಿರಂಗ ಹರಾಜಿಗೆ ಒಳಪಡಿಸದಂತೆ ಒತ್ತಾಯಿಸಿ ತಮಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಇಲ್ಲಿನ ಪ.ಪಂ. ಅಧ್ಯಕ್ಷ ಜೆ.ವಿ. ನಾಗರಾಜ್ ಆರೋಪಿಸಿದರು.ಎರಡು ವರ್ಷದ ಹಿಂದೆ ಇಲ್ಲಿನ ಹಳೇ ಬಸ್‌ನಿಲ್ದಾಣದಲ್ಲಿ 25 ಮಳಿಗೆಗಳ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಇದರಲ್ಲಿ 4 ಮಳಿಗೆಗಳನ್ನು ಹರಾಜಿಗೆ ಒಳಪಡಿಸದೆ ನೇರವಾಗಿ ವಿತರಿಸುವಂತೆ ಕೆಲವರು ರಾಜಕೀಯ ಒತ್ತಡ ತರುತ್ತಿದ್ದಾರೆ. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ, ಹರಾಜಿಲ್ಲದೆ ನಾಲ್ವರಿಗೆ ಮಳಿಗೆಗಳನ್ನು ನೀಡುವಂತೆ ಕಾನೂನುಬಾಹಿರ ಆದೇಶ ನೀಡ್ದ್ದಿದು, ಮೀಸಲಾತಿಯನ್ನು ಅಳವಡಿಸದೆ ಹಾಗೂ ಹರಾಜನ್ನು ನಡೆಸದೆ ನೇರವಾಗಿ ಮಳಿಗೆಗೆಗಳನ್ನು ಬಾಡಿಗೆ ನೀಡುವುದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.ಕೆಲವು ವ್ಯಕ್ತಿಗಳಿಗೆ ನೇರವಾಗಿ ಮಳಿಗೆ ನೀಡುವುದಕ್ಕೆ ವಿವಿಧ ಸಂಘ-ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಮೇಲ್ನೋಟಕ್ಕೆ ತಪ್ಪು ಎನಿಸಿದ್ದರಿಂದ ಎಲ್ಲಾ ಮಳಿಗೆಗಳನ್ನು ಬಹಿರಂಗ ಹರಾಜಿನ ಮೂಲಕ ವಿತರಿಸಲು ನಿರ್ಧರಿಸಿದ್ದರಿಂದ ಕೆಲವು ವ್ಯಕ್ತಿಗಳು ನನ್ನ ಮೇಲೆ ದೌರ್ಜನ್ಯ ಮಾಡುವ ಮತ್ತು ಜೀವ ತೆಗೆಯುವುದಾಗಿ ದೂರವಾಣಿಯ ಮೂಲಕ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ  ಪೊಲೀಸರಿಗೆ ದೂರು ನೀಡಿದ್ದೇನೆ.ಹರಾಜು ನಡೆಸುವ ನಿಟ್ಟಿನಲ್ಲಿ ಮೀಸಲಾತಿ ಪಟ್ಟಿಯನ್ನು ತಯಾರಿಸಿ ಪ.ಪಂ. ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗುವುದು. ನಂತರ ಜಿಲ್ಲಾಧಿಕಾರಿಗೆ ಅನುಮೋದನೆಗೆ ಕಳುಹಿಸಲಾಗುವುದು. ಮಳಿಗೆ ಸಂಕೀರ್ಣ ನಿರ್ಮಿಸಿ 2 ವರ್ಷ ಕಳೆದರೂ ಹರಾಜು ನಡೆಯದ ಕಾರಣ ಪ.ಪಂ.ಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಅಧ್ಯಕ್ಷ ನಾಗರಾಜ್ ಹೇಳಿದರು.ಪ.ಪಂ. ಅಧ್ಯಕ್ಷರಿಗೆ ಬೆದರಿಕೆ ಕರೆ ಬಂದಿರುವುದು ಖಂಡನೀಯ. ಬೆದರಿಕೆ ಹಾಕಿರುವವರನ್ನು ಪತ್ತೆಹಚ್ಚಿ ಶಿಕ್ಷಿಸಬೇಕು ಎಂದು ಸದಸ್ಯರಾದ ತಿಪ್ಪೇಸ್ವಾಮಿ, ಮಹಮ್ಮದ್ ಅನ್ವರ್‌ಸಾಬ್, ವೈ.ಎನ್. ಮಂಜುನಾಥ್ ಹಾಗೂ ಮಹೇಂದ್ರ ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry