ಪ.ಪಂ. ಕಚೇರಿಗೆ ಮುತ್ತಿಗೆ

7

ಪ.ಪಂ. ಕಚೇರಿಗೆ ಮುತ್ತಿಗೆ

Published:
Updated:

ಹಳಿಯಾಳ: ಪಟ್ಟಣದಲ್ಲಿ ಅಶುದ್ಧ ನೀರು ಸರಬರಾಜು ಹಾಗೂ ನೀರಿನ ವಾರ್ಷಿಕ ಕರ ದುಪ್ಪಟ್ಟು ಮಾಡಿದ ಹಿನ್ನೆಲೆಯಲ್ಲಿ ನಗರದ ಹೊರಗಿನ ಗುತ್ತಿಗೇರಿ ಬಡಾವಣೆಯ ರಹವಾಸಿಗಳು ಹಾಗೂ ಜಯ ಕರ್ನಾಟಕ ಸಂಘದ ಸದಸ್ಯರು ಗುರುವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಜಯ ಕರ್ನಾಟಕ ಸಂಘದ ವತಿಯಿಂದ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ತಹಶೀಲ್ದಾರ ಕಚೇರಿಯಿಂದ ಘೋಷಣೆಗಳನ್ನು ಕೂಗುತ್ತಾ ಪಟ್ಟಣ ಪಂಚಾಯಿತಿಗೆ ತೆರಳಿ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಮನ್ಸೂರಲಿ ಅವರಿಗೆ ಜಯ ಕರ್ನಾಟಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ವಿಲಾಸ ಕಣಗಲಿ ಮನವಿ ಸಲ್ಲಿಸಿದರು.ನೀರಿನ ಅವ್ಯವಸ್ಥೆಯ ಬಗ್ಗೆ ಜಯ ಕರ್ನಾಟಕ ವತಿಯಿಂದ ಈ ಹಿಂದೆನೇ ಪಟ್ಟಣ ಪಂಚಾಯಿತಿಗೆ  ಮನವಿ ನೀಡಿದ್ದರೂ ಕೂಡ ಪ.ಪಂ. ಸಿಬ್ಬಂದಿ  ಯಾವುದೇ ಕ್ರಮ ಕೈಗೊಂಡಿಲ್ಲ. ಕುಡಿಯುವ ನೀರಿನ ಸರಬರಾಜಿಗಾಗಿ ವಾರ್ಷಿಕ ಕರವನ್ನು ದುಪ್ಪಟ್ಟು ಮಾಡಿರುತ್ತಾರೆ ಹಾಗೂ ಸ್ವಚ್ಛವಾದ ನೀರು ನಿಗದಿತ ಸಮಯಕ್ಕೆ ಸಹ ಬಿಡುತ್ತಿಲ್ಲ. 2-3 ದಿನಗಳಾದರೂ ಸಹ ಸರಿಯಾದ ವೇಳೆಯಲ್ಲಿ ನೀರು ಸರಬರಾಜು ಮಾಡುವುದಿಲ್ಲ. ಪಟ್ಟಣದ ನಿವಾಸಿಗಳ ತೊಂದರೆಯನ್ನು ನಿವಾರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಮುಖಂಡರಾದ ವಿಲಾಸ ಕಣಗಲಿ, ವಿಕ್ರಾಂತ ಶೆಟ್ಟಿ, ಶರಥ ಶೆಟ್ಟಿ, ಸಂಜೀವ ಗೌಡಾ ಹಟ್ಟಿಹೋಳಿ, ಶಿವ ಕುಂಆರ ಹುಲಕೊಪ್ಪ, ಮಹೇಶ ಹುಲಕೊಪ್ಪ, ರುದ್ರಪ್ಪಾ ಮಲ್ಕಿ, ಮಂಜುನಾಥ ಕಿತ್ತೂರ, ರಾಜು ಹಟ್ಟಿಹೊಳಿ, ಉಮೇಶ ಗೌಡಾ, ಶ್ರೀದೇವಿ ಕುಕಡೊಳ್ಳಿ, ಸರೋಜಾ ಚಲವಾದಿ, ನಿರ್ಮಲಾ ಜಾವಳ್ಳಿ, ರುದ್ರಪ್ಪ ಚಲವಾದಿ, ಗುಲಾಬಿ ಚಲವಾದಿ, ರಜಪೂತ, ಶಾಂತವ್ವ ಚಲವಾದಿ ಮುಖಂಡತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry