ಪಯೊನೀರ್: ಹೊಸ ಉತ್ಪನ್ನ ಮಾರುಕಟ್ಟೆಗೆ

7

ಪಯೊನೀರ್: ಹೊಸ ಉತ್ಪನ್ನ ಮಾರುಕಟ್ಟೆಗೆ

Published:
Updated:
ಪಯೊನೀರ್: ಹೊಸ ಉತ್ಪನ್ನ ಮಾರುಕಟ್ಟೆಗೆ

ಬೆಂಗಳೂರು: ಮನೆಯಲ್ಲಿಯೇ ಸಿನಿಮಾ ಮಂದಿರದ ವಿಶಿಷ್ಟ ಅನುಭವ ನೀಡುವಂತಹ ಅತ್ಯಾಧುನಿಕ ತಂತ್ರಜ್ಞಾನ ದೃಕ್ - ಶ್ರವಣ ಸಾಧನ ಮತ್ತು ಬ್ಲೂ-ರೇ ಪ್ಲೇಯರ್‌ಗಳನ್ನು ಪಯೊನೀರ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್  ಲಿಮಿಟೆಡ್ ಗುರುವಾರ ಇಲ್ಲಿ ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿತು. ಈ ವಿಶಿಷ್ಟ ಬಗೆಯ ಆಡಿಯೊ - ವಿಡಿಯೊ ರೀಸಿವರ್‌ಗಳು ಅತ್ಯುತ್ತಮ ಧ್ವನಿ ಗುಣಮಟ್ಟ ಆಲಿಸಲು ಅವಕಾಶ ಮಾಡಿಕೊಡುವುದರ ಜತೆಗೆ ಐಫೋನ್, ಐಪ್ಯಾಡ್‌ಗಳ ಜತೆಗೆ ಸಂಪರ್ಕಿಸಿ ನಿಯಂತ್ರಿಸಲೂ ಅವಕಾಶ ಕಲ್ಪಿಸಿಕೊಡಲಿವೆ. ವೈ-ಫೈ ತಂತ್ರಜ್ಞಾನದ ನೆರವಿನಿಂದ ಮನೆಯ ಅನೇಕ ಕಡೆಗಳಲ್ಲಿ ಈ ಸೌಲಭ್ಯ ಹಂಚಿಕೊಳ್ಳಬಹುದು. ಪಯೊನೀರ್ ಹೋಮ್ ಥೇಟರ್ ಸೌಲಭ್ಯವನ್ನೂ ಪರಿಚಯಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಶಿಂಗೊ ಇಕ್ಯುಚಿ ನುಡಿದರು. ಬೆಂಗಳೂರಿನ ಮಾರುಕಟ್ಟೆಗೆ ಮೊದಲ ಬಾರಿಗೆ ಎವಿ ರಿಸೀವರ್ ಮತ್ತು ಬ್ಲೂ-ರೇ ಪ್ಲೇಯರ್‌ಗಳನ್ನೂ ಪರಿಚಯಿಸಲಾಗುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry