`ಪರಂಪರೆಯಿಂದ ಸಂಸ್ಕೃತಿ ಉಳಿವು'

7

`ಪರಂಪರೆಯಿಂದ ಸಂಸ್ಕೃತಿ ಉಳಿವು'

Published:
Updated:

ಸಿದ್ದಾಪುರ: `ಕಲೆ, ಸಾಹಿತ್ಯ, ಸಂಗೀತವೂ ಸೇರಿದಂತೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಮಾಧ್ಯಮವೆಂದರೆ ಪರಂಪರೆ' ಎಂದು  ಹಿರಿಯ ವೈದಿಕ ವಿದ್ವಾಂಸ ಕೃಷ್ಣ ಭಟ್ಟ ಅಡವಿತೋಟ ಹೇಳಿದರು.ತಾಲ್ಲೂಕಿನ ಮಗೇಗಾರಿನ `ಮುರಳೀವನ' ಸಂಸ್ಥೆ ಮತ್ತು ಪಟ್ಟಣದ `ಸಂಸ್ಕೃತಿ ಸಂಪದ'ದ ಆಶ್ರಯದಲ್ಲಿ, ಮಗೇಗಾರಿನ ವೆಂಕಪ್ಪ ದುಗ್ಗಪ್ಪ ಹೆಗಡೆ ಅವರ ಸ್ಮರಣಾರ್ಥ ಸ್ಥಳೀಯ ಶಂಕರ ಮಠದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ `ಸನ್ಮಾನ, ಉಪನ್ಯಾಸ ಮತ್ತು ಸಂಗೀತ ಕಾರ್ಯಕ್ರಮ' ಉದ್ಘಾಟಿಸಿ ಅವರು ಮಾತನಾಡಿದರು.`ಪರಂಪರೆ, ಶಿಷ್ಟಾಚಾರ, ಸಂಪ್ರದಾಯ  ಇವೆಲ್ಲ ಬಹುತೇಕ ಒಂದೇ ರೀತಿಯ ಅರ್ಥ ಸೂಸುವ ಪದಗಳಾಗಿವೆ. ನಮಗೊಂದು ಪರಂಪರೆ ಇದೆ.ಅದಕ್ಕೆ ಅನೇಕ ಆಯಾಮಗಳಿವೆ. ಇಂದಿನ ಆಧುನಿಕ ಜಗತ್ತಿನಲ್ಲಿ ಪರಂಪರೆ ಎಂದರೆ ವಿರೋಧ ವ್ಯಕ್ತಪಡಿಸುವವರು ಇದ್ದಾರೆ. ಪರಂಪರೆ ಪ್ರಾಚೀನವಾಗಿ ಬಂದಿದ್ದು, ಅದನ್ನು ಪರಿಷ್ಕರಣೆಯ ಮೂಲಕ ನೋಡಬೇಕಾಗುತ್ತದೆ' ಎಂದರು.ಹಿರಿಯ ಲೇಖಕ, ಸಂಶೋಧಕ ವಿಶ್ವೇಶ್ವರ ಹೆಗಡೆ ಅತ್ತಿಮುರುಡು ದಂಪತಿಯನ್ನು  ರಾಮಚಂದ್ರ ಹೆಗಡೆ, ಶ್ರೀಧರ  ಹೆಗಡೆ, ಚಂದ್ರಶೇಖರ ಹೆಗಡೆ ಮತ್ತು ಅನಂತ ಹೆಗಡೆ ಸನ್ಮಾನಿಸಿದರು. ಕಿರಣ ಹೆಗಡೆ ಮಗೇಗಾರ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತರ ಕುರಿತು  ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಮಾತನಾಡಿದರು.`ಸಂಸ್ಕೃತಿ ಹಾಗೂ ರಾಷ್ಟ್ರೀಯ ಭಾವೈಕ್ಯತೆ' ಕುರಿತು ವಿಶ್ವೇಶ್ವರ ಹೆಗಡೆ ಅತ್ತಿಮುರುಡು ಉಪನ್ಯಾಸ ನೀಡಿದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು.

`ಮುರಳೀವನ' ಸಂಸ್ಥೆಯ ನಿರ್ದೇಶಕ ಚಂದ್ರಶೇಖರ ಹೆಗಡೆ ಮಗೇಗಾರ ಸ್ವಾಗತಿಸಿದರು. ಪ್ರಶಾಂತ ಹೆಗಡೆ ಮಗೇಗಾರ ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ಅನಂತ ಹೆಗಡೆ ವಾಜಗಾರ (ತಬಲಾ ಸೋಲೋ), ಡಾ.ಸಮೀರ ಬಾದ್ರಿ (ಲೆಹರಾ), ಕಿರಣ ಹೆಗಡೆ ಮಗೇಗಾರ ಹಾಗೂ ಕೆನಡಾದ ಜೇಕೋಬ್ ಚಾರ್ಕಿ (ಬಾಂಸುರಿ ಮತ್ತು ಝೆಲೋ ವಾದನಗಳ ಜುಗಲಬಂದಿ) ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry