ಗುರುವಾರ , ಆಗಸ್ಟ್ 13, 2020
26 °C

ಪರಂಪರೆ, ಆಧುನಿಕತೆ ಬೆಸೆದ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಂಪರೆ, ಆಧುನಿಕತೆ ಬೆಸೆದ ಪ್ರದರ್ಶನ

ವಸ್ತ್ರಕ್ಕೆ ಭಾರತದಲ್ಲಿ ವಿಶೇಷ ಮನ್ನಣೆ. ಅದರಲ್ಲೂ ಹತ್ತಿ ಮತ್ತು ರೇಷ್ಮೆ ಉಡುಪುಗಳಿಗೆ ಹಿಂದಿನ ಕಾಲದಿಂದಲೂ ಆದ್ಯತೆ ಹೆಚ್ಚು.ರೇಷ್ಮೆ ಮತ್ತು ಕೈಮಗ್ಗದ ಬಟ್ಟೆಗಳು ಇದುವರೆಗೂ ಪಾರಂಪರಿಕವಾಗಿ ಮಾತ್ರ ಗೋಚರಿಸುತ್ತಿದ್ದವು.ಆದರೆ ಈಗ ಪಾರಂಪರಿಕತೆಗೆ ಆಧುನಿಕ ವಿನ್ಯಾಸ ನೀಡಿ ಅದರಿಂದ ಅದ್ಭುತವೆನಿಸುವ ವಸ್ತ್ರವೈಭವವನ್ನು ಪರಿಚಯಿಸುವ ಕ್ರಿಯಾಶೀಲತೆ ಹೆಚ್ಚಿದೆ. ಇಂತಹ ವಸ್ತ್ರಕಲೆಯನ್ನು ಹೊಂದಿರುವ ಕಾಟನ್ ಮತ್ತು ರೇಷ್ಮೆ ಕೈಮಗ್ಗದ ಬಟ್ಟೆಗಳನ್ನು ನಗರವಾಸಿಗಳಿಗೆ ಪರಿಚಯಿಸಲೆಂದೇ ಬಂದಿದೆ `ವೀವ್ಸ್~ ವಸ್ತ್ರ ಪ್ರದರ್ಶನ.`ಪರಂಪರೆ, ಆಧುನಿಕ ಅಥವಾ ಎರಡೂ ಸಮ್ಮಿಳಿತಗೊಂಡಿರುವ ವಸ್ತ್ರ ಪ್ರಕಾರಗಳನ್ನು ಮೆಚ್ಚುವವರಿಗೆ ಇಲ್ಲಿ ಆಯ್ಕೆ ಹಲವಿವೆ. ಪ್ರತಿಯೊಂದು ವಯೋಮಾನದವರಿಗೂ ಹೊಂದುವಂತಹ ವಸ್ತ್ರಗಳನ್ನು ಅತಿ ಉನ್ನತ ಗುಣಮಟ್ಟದಲ್ಲಿ ನೀಡಲಾಗಿದೆ~ ಎಂಬುದು ಆಯೋಜಕರಲ್ಲಿ ಒಬ್ಬರಾದ ಮಾಧವಿ ನಾಯ್ಡು ಅವರ ಮಾತು.`ಉತ್ತಮ ಗುಣಮಟ್ಟ ನಿರೀಕ್ಷಿಸುವವರಿಗೆ ಈ ವೀವ್ಸ್ ಒಳ್ಳೆಯ ಅವಕಾಶ ನೀಡಿದೆ. ಗ್ರಾಹಕರಿಗೆ ಅನುಕೂಲತೆ ಒದಗಿಸುವುದರೊಂದಿಗೆ ನೇಕಾರರಿಗೂ ನೆರವಾಗುವ ಉದ್ದೇಶದೊಂದಿಗೆ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ~ ಎನ್ನುತ್ತಾರೆ ಮಾಧವಿ.ಮನಸೆಳೆಯುವ ತರಹೇವಾರಿ ಬಣ್ಣಗಳಲ್ಲಿ, ವಿನ್ಯಾಸಗಳಲ್ಲಿ, ಹಲವು ನಮೂನೆಯ ಪ್ರಿಂಟ್‌ಗಳಲ್ಲಿ, ಎಂಬ್ರಾಯ್ಡರಿ ಕಲೆಯಲ್ಲಿ ಭಾರತೀಯ ಕೈಮಗ್ಗಗಳು ಇಲ್ಲಿ ಪ್ರದರ್ಶಿತಗೊಳ್ಳುವುದಲ್ಲದೆ ಡಿಸೈನರ್ ವಸ್ತ್ರಗಳನ್ನೂ ಗ್ರಾಹಕರ ಆಯ್ಕೆಗಿಡಲಾಗಿದೆ. ಪ್ರತಿಯೊಂದು ರಾಜ್ಯದಲ್ಲೂ ವಿಶೇಷವಾದ ವಸ್ತ್ರಪ್ರಕಾರವಿದ್ದು, ಇವು ಅಲ್ಲಿನ ಸಂಸ್ಕೃತಿಯನ್ನೂ ಪ್ರತಿನಿಧಿಸುತ್ತವೆ.ಅದರಂತೆಯೇ ಕಾಂಚೀವರಂ, ಕ್ರೇಪ್, ಧರ್ಮಾವರಂ, ಉಪ್ಪಡಾಸ್, ಪೋಚಂಪಲ್ಲಿ, ನಾರಾಯಣ್‌ಪೇಟ್, ಗದ್ವಾಲ್, ಪೈತಾನೀಸ್, ಬನಾರಸ್, ಜಮ್‌ದಾನಿ, ಜಮಾವಾರ್, ಟಸ್ಸಾರ್, ಎರಿ, ಮುಗ, ಕೋಸಾ ಇಂತಹ ಹಲವು ನಮೂನೆಯ ವಸ್ತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡುವ ಮೂಲಕ ಹಲವು ರಾಜ್ಯಗಳ ವಿಶೇಷತೆಯನ್ನೂ ಪರಿಚಯಿಸಲಾಗಿದೆ.

 

ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಹಲವು ರೀತಿಯ ವಸ್ತ್ರಗಳು ಲಭ್ಯ.

ಕೊಯಮತ್ತೂರ್, ಚೆಟ್ಟಿನಾಡು, ಗದ್ವಾಲ್, ಪೋಚಂಪಲ್ಲಿ, ವೆಂಕಟಗಿರಿ, ಮಂಗಳಗಿರಿ, ಚಾಂದೇರಿ, ಮಾಹೇಶ್ವರಿ, ಕೋಟಾ ದೋರಿಯಾ, ಧಾಕೈ ಇಂತಹ ಅಪರೂಪದ, ಅಪ್ಪಟ ಕಾಟನ್ ಬಟ್ಟೆಗಳು, ಸಾಂಬಾಲ್ಪುರಿಯಂತಹ ವಿಶೇಷ ವಸ್ತ್ರ ಇಲ್ಲಿ ಒಂದೇ ಸೂರಿನಡಿ ದೊರೆಯಲಿರುವುದು ವಿಶೇಷವೆನಿಸಿದೆ.ಟೈ ಅಂಡ್ ಡೈ, ಬಾಂಧೇಜ್, ಬ್ಲಾಕ್ ಅಂಡ್ ಡಾಬು, ಬಟಿಕ್, ಕಲಾಂಕಾರಿ, ಹೀಗೆ ವಿವಿಧ ನಮೂನೆಯ ಪ್ರಿಂಟ್‌ಗಳನ್ನು ಹೊಂದಿರುವ ಕಾಟನ್ ಮತ್ತು ರೇಷ್ಮೆ ಕೈಮಗ್ಗದ ಸೀರೆಗಳು, ಡ್ರೆಸ್ ಮೆಟಿರಿಯಲ್‌ಗಳು, ಸ್ಟೋಲ್, ದುಪ್ಪಟಾ, ಕುರ್ತಾ, ಕುರ್ತಿ ಮತ್ತು ಗೃಹಾಲಂಕಾರಿಕ ಬಟ್ಟೆಗಳು ಇಲ್ಲಿವೆ. ಮಿಕ್ಸ್ ಅಂಡ್ ಮ್ಯಾಚ್ ಮಾಡುವ ಅವಕಾಶವೂ ಗ್ರಾಹಕರಿಗಿದೆ.ಜುಲೈ 11 ರಿಂದ ಆರಂಭಗೊಂಡಿರುವ ಈ ಪ್ರದರ್ಶನ ಮತ್ತು ಮಾರಾಟ ಮೇಳ ಜುಲೈ 16ರವರೆಗೂ ನಡೆಯುತ್ತದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3ರವರೆಗೆ ಪ್ರದರ್ಶನವಿರುತ್ತದೆ.ಸ್ಥಳ: ಸಿಂಧೂರ್ ಕನ್ವೆನ್ಷನ್ ಸೆಂಟರ್, 15ನೇ ಅಡ್ಡರಸ್ತೆ, ಜೆ.ಪಿ. ನಗರ 1ನೇ ಹಂತ, ರಿಂಗ್ ರೋಡ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.