ಶುಕ್ರವಾರ, ಮೇ 27, 2022
27 °C

`ಪರಂಪರೆ ತಿಳಿಯಲು ಜಾನಪದ ಮಹತ್ವದ ಆಕರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಸನಾತನ ಇತಿಹಾಸ ಮತ್ತು ಪರಂಪರೆಯನ್ನು ತಿಳಿಯಲು ಜಾನಪದ ಅತ್ಯಂತ ಮಹತ್ವದ ಆಕರವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ  ಪ್ರೊ.ಅಂಬಳಿಕೆ ಹಿರಿಯಣ್ಣ ಅಭಿಪ್ರಾಯ ಪಟ್ಟರು.ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ `ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ'ಗಳಿಗೆ ಚಾಲನೆ ನೀಡಿದ ಅವರು, ಇತಿಹಾಸ ಮತ್ತು ಪರಂಪರೆ ಒಂದು ನಾಣ್ಯದ ಎರಡು ಮುಖಗಳಂತಿದ್ದು, ನಿಜವಾದ ಇತಿಹಾಸ ಮತ್ತು ಪರಂಪರೆಯನ್ನು ತಿಳಿದು ಅದನ್ನು ಪುನರ್‌ರಚಿಸಲು ಜಾನಪದ ಸಾಹಿತ್ಯದಿಂದ ಮಾತ್ರ ಸಾಧ್ಯವಿದೆ ಎಂದರು.ಜಾನಪದದಲ್ಲಿರುವ ಪಾರಂಪರಿಕ ಜ್ಞಾನ, ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ತಿಳಿದುಕೊಳ್ಳುವ ಉದ್ದೆೀಶದಿಂದ ಶಾಲಾ ಪಠ್ಯಕ್ರಮಗಳಲ್ಲಿ ಜಾನಪದ ವಿಷಯವನ್ನು ಅಳವಡಿಸುವ ಸಂಬಂಧ ಪ್ರಸ್ತಾವವೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು, ಜಾನಪದ ಕ್ರೀಡಾಕೋಶವನ್ನು ರೂಪಿಸುವ ಉದ್ದೆೀಶದಿಂದ ತಯಾರಿಸಲಾದ ಕ್ರಿಯಾಯೋಜನೆ ಈಗಾಗಲೇ ಸರ್ಕಾರದ ಮುಂದೆ ಇದೆ ಎಂದರು.ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಎ. ಸೋಮಶೇಖರಪ್ಪ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯವಶ್ಯಕವಾಗಿದೆ. ಅದರಲ್ಲಿ ಜನಪದ ಸಾಹಿತ್ಯ ಬಳಸಿರುವುದು ಮುಖ್ಯವಾಗಿದೆ ಎಂದರು.ಮೌಲ್ಯಮಾಪನ ಕುಲಸಚಿವ ಪ್ರೊ.ಸ.ಚಿ.ರಮೇಶ, ಹಿರಿಯ ಸಂಶೋಧನಾ ಅಧಿಕಾರಿ ಡಾ.ಕೆ.ಪ್ರೇಮಕುಮಾರ, ಖ್ಯಾತ ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ, ಸಂದರ್ಶಕ ಪ್ರಾಧ್ಯಾಪಕ ಡಾ. ಕೆ.ಕಮಲಾಕ್ಷ, ಡಾ.ಶ್ರಿಶೈಲ ಹುದ್ದಾರ, ಡಾ.ರಾಮು ಮೂಲಗಿ, ಕಲಾವಿದರಾದ ಬಸವರಾಜ ಶಿಗ್ಗಾವಿ, ವಿರೇಶ ಬಡಿಗೇರ, ಹಜರೇಸಾಬ್ ನದಾಫ್ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.ಎನ್.ಮೋಹನಕುಮಾರ್ ಪ್ರಾರ್ಥಿಸಿದರು. ಸಣ್ಣಯ್ಯ ಜಿ.ಎಸ್. ಸ್ವಾಗತಿಸಿದರು. ಎಚ್. ಅಭಿನಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ಕರ್ಜಗಿ ವಂದಿಸಿದರು. ನಂತರ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ ಅಸ್ತಿತ್ವಕ್ಕೆ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ ರಚಿಸಲಾಗಿದೆ. ಸಮಿತಿ ಅಧ್ಯಕ್ಷರಾಗಿ ಅಭಿನಯ ಎಚ್. ಕಾರ್ಯದರ್ಶಿಯಾಗಿ  ಸಣ್ಣಯ್ಯ ಜಿ.ಎಸ್. ಖಜಾಂಚಿಯಾಗಿ ರಾಮು ವಾಲ್ಮೀಕಿ ಆಯ್ಕೆಯಾಗಿದರು.ಗಣೇಶ ಭಜಂತ್ರಿ, ಮಹಾಂತೇಶ ಕಳ್ಳಿಗುಡ್ಡ, ಸಂತೋಷ ಸುಬೇದಾರ, ಮಾರುತಿ ಕರ್ಜಗಿ, ಗಣೇಶ ಘಂಟಿ, ಗಣೇಶ ಚವ್ಹಾಣ, ಪರಸನಗೌಡ ಪಾಟೀಲ, ಸತೀಶ ತಿಮ್ಮಣ್ಣವರ, ಸಾವಿತ್ರಿ ಮೋದಿ, ಅಕ್ಕಮಹಾದೇವಿ ಹಿರೇಮಠ, ಸಲ್ಮಾ ಬೇಗಂ ನದಾಫ, ಪ್ರಜಾ ಹಿರೇಮಠ, ರಜಿಯಾ ನದಾಫ್, ನಿರ್ಮಲಾ ಎಸ್, ಶಿಲ್ಪಾ ಚಂದನಗೌಡ ಸಮಿತಿಯ ಪದಾಧಿಕಾರಿಗಳಾಗಿ ಆಯ್ಕೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.