ಶನಿವಾರ, ಜೂನ್ 19, 2021
26 °C

ಪರಂಪರೆ ರಕ್ಷಣೆಗೆ ಧರ್ಮವೇ ತಳಹದಿ: ಸಿದ್ದಗಂಗೆಯ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಬದುಕನ್ನು ಧರ್ಮದ ತಳಹದಿಯ ಮೇಲೆ ರೂಪಿಸಿಕೊಂಡಾಗ ಮಾತ್ರ ಭಾರತೀಯ ಪರಂಪರೆಯನ್ನು ರಕ್ಷಿಸಲು ಸಾಧ್ಯ ಎಂದು ಸಿದ್ದಗಂಗೆಯ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಜಿ ನುಡಿದರು.ತಾಲ್ಲೂಕಿನ ಸೋಲೂರು ಹೋಬಳಿಯ ಉಡುಕುಂಟೆ ದಾಖಲೆ ಮೈಲನಹಳ್ಳಿಯ ಕೌಚುಗಲ್ ಮುನೇಶ್ವರ ಸ್ವಾಮಿ ದೇವಾಲಯದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ನಡೆದ ದೇವಾಲಯದ ಜೀರ್ಣೋದ್ಧಾರ ಸಮಾರಂಭದಲ್ಲಿ ಮಾತನಾಡಿದರು. ದಕ್ಷಿಣ ಕಾಶಿ ಎನಿಸಿರುವ ಶಿವಗಂಗೆಯ ತಪ್ಪಲಿನ ಸುಂದರ ಪರಿಸರದಲ್ಲಿ ಇರುವ ಕೌಚುಗಲ್ಲಪ್ಪನ ದೇವಾಲಯದ ಪಾವಿತ್ರ್ಯವನ್ನು ಮುಂದಿನ ಪೀಳಿಗೆಗೆ ಉಳಿಸಬೇಕಿದೆ.  ಪುಣ್ಯಕ್ಷೇತ್ರಗಳ ದರ್ಶನದಿಂದ ಪವಿತ್ರ ಭಾವನೆಗಳು ಮೂಡುತ್ತವೆ ಎಂದು ಹೇಳಿದರು.ಹಿರಿಯ ಐಪಿಎಸ್ ಅಧಿಕಾರಿ ಮೈಲನಹಳ್ಳಿಯ ರಮೇಶ್ ಮಾತನಾಡಿ, ಕೌಚುಗಲ್ಲಪ್ಪನ ಬೆಟ್ಟದ ಸುಂದರ ಪರಿಸರವನ್ನು ಪ್ರತಿಯೊಬ್ಬರೂ ರಕ್ಷಿಸಬೇಕೆಂದು ಮನವಿ ನೀಡಿದರು.ನೆಲಮಂಗಲದ ಶಾಸಕ ನಾಗರಾಜು ಮಾತನಾಡಿ, ಸೊಲೂರು ಹೋಬಳಿಯ ಅಭಿವೃದ್ಧಿಗೆ 40 ಕೋಟಿ ರೂಪಾಯಿ ಮಂಜೂರಾಗಿದೆ. ದಾಬಸಪೇಟೆಯಿಂದ ಮಾಗಡಿವರೆಗಿನ ರಸ್ತೆ ಅಭಿವೃದ್ಧಿಗೆ ಮಾ.7 ರಂದು ದಾಬಸಪೇಟೆಯಲ್ಲಿ ಶಂಕು ಸ್ಥಾಪನೆ ನಡೆಯಲಿದೆ ಎಂದರು.ಜಿ.ಪಂ.ಸದಸ್ಯ ರಂಗಸ್ವಾಮಿ ಮಾತನಾಡಿ, ಸಾಮಾಜಿಕ ಸಮಾನತೆಯ ತತ್ವದ ಅಡಿಯಲ್ಲಿ ಎಲ್ಲರೂ ಎಲ್ಲರ ಒಳಿತಿಗೆ ದುಡಿಯಬೇಕು ಎಂದರು.ತಾಲ್ಲೂಕು ಪಂಚಾಯ್ತಿ ಸದಸ್ಯ ಶಂಕರಪ್ಪ ಮಾತನಾಡಿ, ಕೌಚುಗಲ್ ಅಪ್ಪನ ದೇವಾಲಯದ ಸುತ್ತಮುತ್ತಲಿನ ಬೆಟ್ಟದಲ್ಲಿ ಇರುವ ಗಿಡಮೂಲಿಕಾ ಸಸ್ಯಗಳನ್ನು ರಕ್ಷಿಸಲು ಮುಂದಾಗಬೇಕಿದೆ ಎಂದರು.ಕನಕಪುರದ ದೇಗುಲ ಮಠಾಧೀಶ ಮುಮ್ಮಡಿ ನಿರ್ವಾಣ ಸ್ವಾಮೀಜಿ ಕ್ಷೇಮಾಭಿವೃದ್ಧಿ ಸಂಘದ ನಾಮಫಲಕ ಅನಾವರಣಗೊಳಿಸಿದರು.ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಸಚಿವ ಡಾ.ಶಂಕರ್ ನಾಯಕ್, ಜಿ.ಪಂ.ಮಾಜಿ ಸದಸ್ಯ ವೀರಪ್ಪ, ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಆನಂದ್, ಕೆಪಿಸಿಸಿ ಸದಸ್ಯ ಎ. ಮಂಜು, ಗುತ್ತಿಗೆದಾರ ಶಿವಶಂಕರ್, ಬಿ.ಎಸ್.ಕೆಂಪರಾಜು, ಹೊನ್ನಮ್ಮಗವಿಯ ಮಠಾಧೀಶ ರುದ್ರಮುನಿ ಶಿವಾಚಾರ್ಯ, ಗದ್ದುಗೆ ಮಠಾಧೀಶ ಮಹಾಂತ ಸ್ವಾಮೀಜಿ, ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿದರು.ಪಟೇಲ್ ಗಂಗರೇವಣ್ಣ, ಬಾಣವಾಡಿಯ ನವಕೋಟಿ ನಾರಾಯಣ ಶೆಟ್ಟಿ, ತಾ.ಪಂ.ಸದಸ್ಯೆ ಶಿವಮ್ಮ ನಾಗರಾಜು, ಕೆ.ಟಿ.ಭೃಂಗೇಶ್, ಪ್ರಾಂಶುಪಾಲರಾದ ಗಂಗಾಂಬಿಕೆ ಮುನಿರಾಜು, ತಾಲ್ಲೂಕು ಡಾ.ಶಿವಕುಮಾರ ಸ್ವಾಮೀಜಿ ಯುವಕರ ಸಂಘದ ಅಧ್ಯಕ್ಷ ತಟ್ಟೆಕೆರೆ ಶರ್ಮಾ ಇತರರನ್ನು ಸನ್ಮಾನಿಸಲಾಯಿತು.ಸಂಘದ ಪದಾಧಿಕಾರಿಗಳಾದ ಕಂಬಾಳು ಮಹೇಶ್, ಕುಮಾರ್, ಅದರಂಗಿಯ ಎಲ್.ಪರಶಿವಮೂರ್ತಿ, ಉಡುಕುಂಟೆಯ ವಿ.ಪಿ.ಪ್ರಕಾಶ್, ಮೈಲನಹಳ್ಳಿಯ ರೇವಣ್ಣಸಿದ್ದಯ್ಯ, ಕಾಗಿಮಡುವಿನ ಉದ್ದೇಶ್, ಕನ್ನಸಂದ್ರದ ಭೃಂಗೀಶ್ ಹಾಗೂ ತಾಲ್ಲೂಕಿನ ವಿವಿಧ ಮಠಾಧೀಶರು ಮತ್ತುಇತರರು ವೇದಿಕೆಯಲ್ಲಿದ್ದರು.ವೀರಾಪುರ, ಗೊಲ್ಲರಹಟ್ಟಿ, ಉಡುಕುಂಟೆ, ಮೈಲನಹಳ್ಳಿ, ಶಿವಗಂಗೆ, ಶ್ರೀಗಿರಿಪುರ, ಲಕ್ಕಯ್ಯನಪಾಳ್ಯ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.