ಪರಧರ್ಮ ಸಹಿಷ್ಣುತೆಯಿಂದ ಶಾಂತಿ ನೆಲಸುತ್ತದೆ

7

ಪರಧರ್ಮ ಸಹಿಷ್ಣುತೆಯಿಂದ ಶಾಂತಿ ನೆಲಸುತ್ತದೆ

Published:
Updated:

ಸುರಪುರ: ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿ ಎಲ್ಲಾ ಕೋಮಿನ ಜನ ವಾಸವಾ ಗಿದ್ದಾರೆ. ನಮ್ಮ ದೇಶ ಪರಧರ್ಮ ಸಹಿಷ್ಣುತೆಗೆ ಹೆಸರುವಾಸಿಯಾಗಿದೆ. ಮೊದಲಿನಿಂದಲೂ ಎಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ. ಎಲ್ಲಾ ಧರ್ಮಗಳ ಪದ್ಧತಿ ಬೇರೆ ಬೇರೆಯಾದರೂ ಗುರಿ ಮಾತ್ರ ಒಂದೇ ಆಗಿರುತ್ತದೆ. ಕಾರಣ ಇತರ ಧರ್ಮೀ ಯರನ್ನು ಭಾತೃತ್ವದಿಂದ ಕಾಣಿ. ಇದರಿಂದ ಶಾಂತಿ ನೆಲಿಸುತ್ತದೆ ಎಂದು ಮಳಖೇಡ ಷರೀಪ್‌ದ ಸಜ್ಜಾದೆ ನಶೀನ್ ಹಜರತ್ ಸೈಯದ್ ಶಾ ಮುಸ್ತಫಾ ಖಾದ್ರಿ ಅಲಜೀಲ್ ಕರೆ ನೀಡಿದರು.ಇಲ್ಲಿನ ಉಸ್ತಾದ್ ಮಂಜಿಲ್‌ದಲ್ಲಿ ಹೈ-ಕ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಪ್ರವಾದಿ ಮಹ್ಮದ್ ಪೈಗಂಬರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದರು.ಆಗಾಗ ಇಂತಹ ಸರ್ವಧರ್ಮ ಸಮ್ಮೇಳನಗಳನ್ನು ಆಯೋಜಿಸುತ್ತಿರ ಬೇಕು. ಸರ್ಕಾರವೇ ಇದಕ್ಕೆ ಪ್ರೋತ್ಸಾಹ ನೀಡಬೇಕು. ಪರಧರ್ಮದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಮಾನವ ಧರ್ಮ ಒಂದೇ ಎಂದು ನಿರೂಪಿಸ ಬೇಕು. ಭಾರತ ಎಲ್ಲಾ ರಾಷ್ಟ್ರಗಳಿಗೆ ಮಾದರಿಯಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಯುವಕರ ಶ್ರಮದ ಅಗತ್ಯ ಇದೆ ಎಂದು ಕ್ಯಾಥೋಲಿಕ್ ಧರ್ಮ ಗುರು ರೆವರೆಂಡ್ ಫಾದರ್ ಸಿರಿಲ್ ಲಸ್ರಾದೊ ಪ್ರತಿಪಾದಿಸಿದರು.ನಿಷ್ಠಿಕಡ್ಲೆಪ್ಪಮಠದ ಪ್ರಭುಲಿಂಗ ಮಹಾಸ್ವಾಮಿಗಳು ಮಾತನಾಡಿ, ಸರ್ವಧರ್ಮ ಸಮನ್ವಯತೆಗೆ ಸುರಪುರ ಹೆಸರು ವಾಸಿ. ಇಲ್ಲಿನ ರಾಜ ವಂಶಸ್ಥರು ಎಲ್ಲಾ ಕೋಮಿನ ಜನರಿಗೆ ಪ್ರಾತಿನಿಧ್ಯ ನೀಡಿದ್ದರು. ಉಸ್ತಾದ್ ಮತ್ತು ನಿಷ್ಠಿ ಮನೆತನದವರು ರಾಜನ ಆಸ್ಥಾನದ ದಿವಾನರಾಗಿದ್ದರು. ಇಂತಹ ಪರಂಪರೆ ಯುಳ್ಳ ಸುರಪುರದಲ್ಲಿ ಕೋಮು ಸೌಹಾರ್ದತೆ ಕಾಯಂ ಆಗಿ ನೆಲೆಗೊಳ್ಳಲಿ ಎಂದು ಹಾರೈಸಿದರು.ಗೋಗಿ ಷರೀಫ್‌ದ ಸಜ್ಜಾದ ಎ ನಶೀನ್ ಮಹ್ಮದ್ ಮಹ್ಮದ್ ಅಲ್ ಹುಸೇನಿಸಾಬ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಮೌಲಾನಾ ಮಹ್ಮದ್ ಉಮರ್ ಉಸ್ತಾದ್ ವಿಶೇಷ ಉಪನ್ಯಾಸ ನೀಡಿದರು.ಶೇಖ ಶಖಾವತ್ ಹುಸೇನ್ ಉಸ್ತಾದ್, ಮೌಲಾನಾ ನಯರ್ ಅಹ್ಮದ್ ನೂರಿ, ಮಹ್ಮದ್ ನಿಜಾ ಮುದ್ದೀನ್ ತೀರಂದಾಜ್, ಮೌಲಾನಾ ಅಬ್ದುಲ ರಫೀಕ್, ಮೌಲಾನಾ ಹಾಫೀಜ ಜಕಾರಿ, ಮಹ್ಮದ್ ಮಕ್ಸೂದ್, ಮೌಲಾನಾ ಅಬ್ದುಲ ನೂರಿ, ಅಬ್ದುಲ ಖಲೀಲ ಸಾಬ ಕಾರಿಗಾರ್, ಉಸ್ತಾದ್ ಫಿರಾಸತ್ ಹುಸೇನ್, ಖ್ಯಾತ ಕವಿ ಎ. ಕೃಷ್ಣ ವೇದಿಕೆ ಯಲ್ಲಿದ್ದರು. ಅಬೀದ್ ಹುಸೇನ್ ಗೋಗಿ ಸ್ವಾಗತಿಸಿದರು. ಖಾಜಾ ಕಲೀ ಮುದ್ದೀನ್ ಫರೀದಿ ನಿರೂಪಿಸಿದರು. ಉಸ್ತಾದ್ ವಜಾಹತ್ ಹುಸೇನ್ ವಂದಿಸಿದರು.ಕಾರ್ಯಕ್ರಮಕ್ಕೆ ಮೊದಲು ಬಾರೆ ಇಮಾಮ್ ಕಮಾನ್‌ದಿಂದ ಮುಲ್ಲಾ ಮೋಹಲ್ಲಾದ ಅಶುರಖಾನಾವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry