ಪರಭಾಷಿಕರಿಗೆ ಮಣೆ ಬೇಡ

7

ಪರಭಾಷಿಕರಿಗೆ ಮಣೆ ಬೇಡ

Published:
Updated:

ಕೆಲವೇ ದಿನಗಳಲ್ಲಿ ಮೈಸೂರು ದಸರಾ ಉತ್ಸವಕ್ಕೆ ಚಾಲನೆ ಸಿಗಲಿದೆ. ರಾಜ್ಯದ ಸಂಸ್ಕೃತಿ, ಪರಂಪರೆ ಈ ಉತ್ಸವದಲ್ಲಿ ಅಡಕವಾಗಿರು ವುದರಿಂದಲೇ ಅದನ್ನು ನಾಡಹಬ್ಬವೆಂದು ಕರೆಯಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುವ ಕೆಲವು ಕಾರ್ಯಕ್ರಮಗಳು ವಿಡಂಬನೆ ಯಂತಾಗಿವೆ.ಯುವ ದಸರಾ ಹೆಸರಿನಲ್ಲಿ ಹಿಂದಿ ಪ್ರದೇಶದ ಕಲಾವಿದರನ್ನು ಕೇಳಿದಷ್ಟು ಸಂಭಾವನೆ ಕೊಟ್ಟು ಕರೆತರುತ್ತಾರೆ.   ದೂರದ ಊರಿನಿಂದ ಬರುವ ದೇಸಿ ಕಲಾವಿದರು, ನೃತ್ಯ ತಂಡದವರಿಗೆ ಸರಿಯಾಗಿ ವ್ಯವಸ್ಥೆ ಕಲ್ಪಿಸದೇ ಅವರನ್ನು ಅವಮಾನಿಸುವುದು– ಇವೆಲ್ಲ ಈಗೀಗ ಸಾಮಾನ್ಯವಾಗಿಬಿಟ್ಟಿದೆ.ಕನ್ನಡಿಗರ ತೆರಿಗೆ ಹಣದಿಂದ ಸರ್ಕಾರದ ಮೂಲಕ ಆಚರಿಸುವ ದಸರಾ ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು, ಕನ್ನಡಿಗರ ಪ್ರತಿಭೆಯನ್ನು ಹೊರಜಗತ್ತಿಗೆ ಪ್ರದ ರ್ಶಿಸುವ ವೇದಿಕೆ ಆಗಬೇಕೇ ಹೊರತು ಪರಭಾಷೆ ಯವರ ಮನರಂಜನೆಗೆ ನೆಲೆ ದೊರಕಿಸಿಕೊಡುವ ವೇದಿಕೆ ಆಗಬಾರದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry