ಮಂಗಳವಾರ, ಮೇ 11, 2021
22 °C

ಪರಮಶಿವಯ್ಯ ವರದಿ ಜಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ ಆರು ಬರಪೀಡಿತ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಹಾಗೂ ಕೃಷಿ ನೀರಾವರಿಗಾಗಿ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ನೀರಾವರಿ ತಜ್ಞ ಡಾ.ಪರಮಶಿವಯ್ಯ ವರದಿಯನ್ನು ಜಾರಿಗೆ ತರಬೇಕು ಎಂದು ಪರಿಸರವಾದಿ ಚೌಡಪ್ಪ ಒತ್ತಾಯಿಸಿದರು.ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿ ಜಾರಿಗೆ ತಂದಲ್ಲಿ ಪಶ್ವಿಮಘಟ್ಟಗಳಿಂದ ಹರಿಯುವ ನದಿಗಳಿಂದ 350 ಟಿಎಂಸಿ ನೀರನ್ನು ಬಯಲು ಸೀಮೆಗೆ ಹರಿಸಿ ಆರು ಜಿಲ್ಲೆಗಳಲ್ಲಿ ಬತ್ತಿದ 16 ನದಿಗಳನ್ನು ಜೀವಂತ ನದಿಗಳಾಗಿ ಮಾಡಬಹುದಾಗಿದೆ ಎಂದರು.

`ಇದರಿಂದ ಸುಮಾರು 8,300 ಕೆರೆಗಳು ತುಂಬುವುದರ ಮೂಲಕ ಅಂತರ್ಜಲ ಹೆಚ್ಚಿ ಜಲಕ್ಷಾಮ ನಿವಾರಿಸಬಹುದಾಗಿದೆ.ಆದರೆ, ಜನಪ್ರತಿನಿಧಿಗಳು ಯೋಜನೆ ಜಾರಿಗೆ ತರುವಲ್ಲಿ ಇಚ್ಛಾಶಕ್ತಿ ತೋರದಿರುವುದು ದುರದೃಷ್ಟಕರ. ಪ್ರಗತಿಪರ ಸಂಘಟನೆಗಳು ಯೋಜನೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಹೋರಾಟ ನಡೆಸಬೇಕಿದೆ~ ಎಂದು ಸಲಹೆ ಮಾಡಿದರು.ರೈತ ಸಂಘ (ಹಸಿರು ಸೇನೆ) ಅಧ್ಯಕ್ಷ ಕೆಂಚೇಗೌಡ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಅಂಕಣ್ಣಗೌಡ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.