ಪರಮಾಣು ನಿಯಂತ್ರಣ ಪ್ರಾಧಿಕಾರ: ಶೀಘ್ರ ಮಸೂದೆ ಮಂಡನೆ

ಗುರುವಾರ , ಜೂಲೈ 18, 2019
28 °C

ಪರಮಾಣು ನಿಯಂತ್ರಣ ಪ್ರಾಧಿಕಾರ: ಶೀಘ್ರ ಮಸೂದೆ ಮಂಡನೆ

Published:
Updated:

 ಚೆನ್ನೈ (ಪಿಟಿಐ):  ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಭಾರತೀಯ ಪರಮಾಣು ನಿಯಂತ್ರಣ ಪ್ರಾಧಿಕಾರ (ಎನ್‌ಆರ್‌ಎಆರ್) ರಚನೆಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಲಾಗುವುದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ತಿಳಿಸಿದ್ದಾರೆ.ಪ್ರಾಧಿಕಾರವು ಸ್ವಾಯತ್ತ ಸಂಸ್ಥೆಯಾಗಿ ಈಗ ಅಸ್ತಿತ್ವದಲ್ಲಿರುವ ಅಣು ಇಂಧನ ನಿಯಂತ್ರಣ ಮಂಡಳಿಯ ರೀತಿಯಲ್ಲೇ ಕಾರ್ಯ ನಿರ್ವಹಿಸಿದರೂ ಪ್ರತ್ಯೇಕವಾಗಿ ಕೆಲಸ ಮಾಡಲಿದೆ. ಇದು ಪ್ರಧಾನಿ ಅಥವಾ ಅಣು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ನೇರ ನಿಯಂತ್ರಣದಲ್ಲಿ ಇರುವ ಸಾಧ್ಯತೆ ಇದೆ ಎಂದಿದ್ದಾರೆ.ಶ್ರೀಲಂಕಾಗೆ ಪ್ರಯಾಣ: ಮೆನನ್ ಅವರು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹಾಗೂ  ಇತರ ಅಧಿಕಾರಿಗಳ ಜತೆ ಶ್ರೀಲಂಕಾಗೆ ತೆರಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry