ಬುಧವಾರ, ಜೂನ್ 16, 2021
27 °C

ಪರಮಾಣು ಶಕ್ತಿ ಪರಿಸರ ಸ್ನೇಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಳಕಲ್: ಒಂದು ದೇಶದ ಅಭಿವೃದ್ಧಿ ಆ ದೇಶದ ಶಕ್ತಿಯನ್ನು ಅವಲಂಬಿಸಿರುತ್ತದೆ. ಪರಮಾಣು ಶಕ್ತಿಯು ಪರಿಸರ ಸ್ನೇಹಿಯಾಗಿದ್ದು, ಅದು ಭವಿಷ್ಯದ ಇಂಧನವಾಗಲಿದೆ ಎಂದು ಕೈಗಾ ಅಣು ವಿದ್ಯುತ್ ಕೇಂದ್ರ ವಿಜ್ಞಾನಿ ಕೆ.ಆರ್. ಮೋಹನರಾಮ್ ಅಭಿಪ್ರಾಯಪಟ್ಟರು.ನಗರದ ವಿಜಯ ಮಹಾಂತೇಶ ಪದವಿ ಕಾಲೇಜಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ  ಸಮಾರಂಭದಲ್ಲಿ `ಸ್ವಚ್ಛ ಇಂಧನ ಮತ್ತು ಪರಮಾಣು ಸುರಕ್ಷತೆ~ ಕುರಿತು ಅವರು ಮಾತನಾಡಿದರು.ಉಷ್ಣಸ್ಥಾವರಗಳಲ್ಲಿ ಲಕ್ಷಾಂತರ ಟನ್ ಕಲ್ಲಿದ್ದಲು ಬಳಸಿ ವಿದ್ಯುತ್ ಪಡೆಯುವಾಗ ಹೊಗೆ, ಬಿಸಿಗಾಳಿ, ಬೂದಿ ಸೇರಿದಂತೆ ಅನೇಕ ರೀತಿಯಲ್ಲಿ ಪರಿಸರಕ್ಕೆ ಧಕ್ಕೆಯಾಗುತ್ತದೆ. ಪರಿಸರ ಮಾಲಿನ್ಯವಿಲ್ಲದೇ   ಕೆಲವೆ ಟನ್ ಅಣು ಇಂಧನ ಬಳಿಸಿ ವಿದ್ಯುತ್ ಪಡೆಯುವ ಅಣು ಸ್ಥಾವರಗಳಿಗೆ  ಕೆಲವರು ವಿರೋಧ ಮಾಡುತ್ತಿರುವುದು ಸರಿಯಲ್ಲ. ಅಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸುವ ಅಣು ಸ್ಥಾವರಗಳಿಂದ ವಿಕಿರಣ ವಾತಾವರಣ ತಡೆ ಸೇರದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ವಿದ್ಯುತ್‌ಗಾಗಿ ಜನರ ಬೇಡಿಕೆ ಹೆಚ್ಚಿದೆ. ಸಾಂಪ್ರಾದಾಯಿಕ ಇಂಧನ ಮೂಲಗಳು ಮುಗಿಯುತ್ತಿವೆ. ಕೊಳೆಗಾಳಿಯು ಭೂಮಿಯನ್ನು ಬಿಸಿ ಮಾಡುತ್ತಿದೆ. ಅಭಿವೃದ್ಧಿಯ ವೇಗವನ್ನು ಉಳಿಸಿಕೊಳ್ಳಬೇಕಾದರೆ ಶಕ್ತಿಯ ಅಗತ್ಯ ಇದೆ. ಹಾಗಾಗಿ ಪರಮಾಣು ಶಕ್ತಿಯಿಂದ ವಿದ್ಯುತ್ ತಯಾರಿಸದೇ ಅನ್ಯ ಮಾರ್ಗಗಳೇ ಇಲ್ಲ ಎಂದರು.ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2012 ರ ವರ್ಷದ ವಿಷಯಗಳಾದ `ಶುದ್ಧ ಇಂಧನ ಹಾಗೂ ಪರಮಾಣು ಸುರಕ್ಷತೆ~ ವಿಷಯವಾಗಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ, ಸಿದ್ಧ ಭಾಷಣ, ನಿಬಂಧ ಸ್ಪರ್ಧೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಡಾ.ಮಹಾಂತ ಸ್ವಾಮೀಜಿ  ಕಾರ್ಯಕ್ರಮ ಉದ್ಘಾಟಿಸಿದರು. ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಂಚಾಲಕ ಪ್ರೊ.ಎಸ್.ವಿ. ಸಂಕನೂರ, ಅಧ್ಯಕ್ಷತೆ ವಹಿಸಿದ್ದರು.ಎಂ.ವಿ.ಪಾಟೀಲ,  ನಾಗಪ್ಪ ಕನ್ನೂರ, ಅಶೋಕ ಬಿಜ್ಜಲ, ಪ್ರಾಚಾರ್ಯ ಡಾ.ಶಂಭು ಬಳಿಗಾರ ಕಾಲೇಜು ಕಮಿಟಿ ಚೇರಮನ್ ರಾಜಶೇಖರ ಸೂಡಿ, ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಬಿ.ಎಂ. ಹೊಸಮನಿ, ಡಾ.ಪಿ.ಎಸ್.ಕಂದಗಲ್ ಹಾಗೂ ಪ್ರೊಗಾಣಿಗೇರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.