ಮಂಗಳವಾರ, ಏಪ್ರಿಲ್ 13, 2021
32 °C

ಪರಮಾಣು ಸ್ಥಾವರ ಸುರಕ್ಷತೆ ಎಇಆರ್‌ಬಿ ಸಮಿತಿಯಿಂದ ಉಪಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಜಪಾನ್‌ನ ಫುಕುಶಿಮಾ ಅಣು ಸ್ಥಾವರದ ರೀತಿಯಲ್ಲೇ ನಿರ್ಮಾಣವಾಗಿರುವ ತಾರಾಪುರ 1 ಮತ್ತು 2ನೇ ಘಟಕಗಳ ಸುರಕ್ಷತೆಯ ಬಗ್ಗೆ ಸ್ವತಂತ್ರವಾಗಿ ಅಧ್ಯಯನ ನಡೆಸಲು ರಚಿಸಲಾಗಿರುವ ಭಾರತೀಯ ಅಣು ವಿದ್ಯುತ್ ನಿಯಂತ್ರಣ ಮಂಡಳಿಯ (ಎಇಆರ್‌ಬಿ) ಉನ್ನತ ಮಟ್ಟದ ಪರಿಶೀಲನಾ ಸಮಿತಿಯು ಪರಿಣಿತರ ಉಪ ಸಮಿತಿಯೊಂದನ್ನು ರಚಿಸಿದೆ.ಫುಕುಶಿಮಾದಲ್ಲಿನ ಸ್ಥಾವರಗಳು ಹಾಗೂ ತಾರಾಪುರದಲ್ಲಿನ 1 ಮತ್ತು 2ನೇ ಘಟಕಗಳು ಬಾಯ್ಲಿಂಗ್ ವಾಟರ್ ರಿಯಾಕ್ಟರ್‌ಗಳು (ಬಿಡಬ್ಲ್ಯುಆರ್) ಒಂದೇ ರೀತಿ ಇವೆ.ಇದರಿಂದಾಗಿ ದುರಂತದ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ ಸುರಕ್ಷಾ ಕ್ರಮ ಕೈಗೊಳ್ಳುವುದಕ್ಕೆ ಈ ಉಪಸಮಿತಿ ರಚಿಸಲಾಗಿದೆ.ದೇಶದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಅಣು ವಿದ್ಯುತ್ ಸ್ಥಾವರಗಳನ್ನು ಭೂಕಂಪ, ಸುನಾಮಿಗಳಂತಹ ಪ್ರಕೃತಿ ವಿಕೋಪಗಳಿಂದ ಪಾರು ಮಾಡುವ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ ಐಐಟಿಗಳು, ಹವಾಮಾನ ಇಲಾಖೆಗಳ ಪರಿಣಿತರನ್ನು ಒಳಗೊಂಡ ಮತ್ತೊಂದು ಉಪ ಸಮಿತಿಯನ್ನೂ ರಚಿಸಲಾಗುತ್ತಿದೆ ಎಂದು ಎಇಆರ್‌ಬಿ ಮೂಲಗಳು ತಿಳಿಸಿವೆ.ಎಇಆರ್‌ಬಿ ಮಾಜಿ ಅಧ್ಯಕ್ಷ ಎಸ್.ಕೆ. ಶರ್ಮಾ ನೇತೃತ್ವದ 10 ಸದಸ್ಯರ ಎಇಆರ್‌ಬಿ ಸಮಿತಿ ಜುಲೈ ತಿಂಗಳಿನಲ್ಲಿ  ತನ್ನ ಮಧ್ಯಂತರ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.