ಪರಮೇಶ್ವರ್‌ ಪರ ಕರಪತ್ರ

7

ಪರಮೇಶ್ವರ್‌ ಪರ ಕರಪತ್ರ

Published:
Updated:

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌ ಅವರಿಗೆ ಉಪ ಮುಖ್ಯ­ಮಂತ್ರಿ ಸ್ಥಾನ ನೀಡದಿದ್ದರೆ ಲೋಕ­ಸಭಾ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್‌ಗೆ ಬಹಿಷ್ಕಾರ ಹಾಕುತ್ತಾರೆ ಎಂದು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕರಪತ್ರ ಹಂಚಲಾಗಿದೆ.ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌  ಅಧ್ಯಕ್ಷತೆಯಲ್ಲಿ ಪ್ರದೇಶ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆ ನಡೆಯುತ್ತಿರುವಾಗಲೇ ಕೊರಟ­ಗೆರೆಯ ಕೆಲವರು ಪರಮೇಶ್ವರ್‌ ಪರ ಕರಪತ್ರ ಹಂಚಿದರು. ತಾಲ್ಲೂಕು ಆದಿ­­ಜಾಂಬವ ಸಂಘದ ಅಧ್ಯಕ್ಷ ಎನ್‌.ಚಿಕ್ಕರಂಗಯ್ಯ ಸೇರಿದಂತೆ ಹಲ­ವರ ಹೆಸರು ಈ ಕರಪತ್ರದಲ್ಲಿದೆ. ರಾಜ್ಯ­ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಲ್ಲಿ ಪರಮೇಶ್ವರ್‌ ಪಾತ್ರ ಹಿರಿದಾಗಿದ್ದು, ಅವರಿಗೆ ಸಂಪು­ಟ­­­ದಲ್ಲಿ ಸ್ಥಾನ ನೀಡದೇ ಕಡೆಗಣಿ­ಸ­ಲಾಗಿದೆ ಎಂದು ಕರಪತ್ರದಲ್ಲಿ ದೂರಲಾಗಿದೆ.‘ಪರಮೇಶ್ವರ ಅವರಿಗೆ ಉಪ ಮುಖ್ಯ­ಮಂತ್ರಿ ಹುದ್ದೆ ನೀಡದಿದ್ದರೆ ಕಾಂಗ್ರೆಸ್‌ ಪಕ್ಷವನ್ನು ಬಹಿಷ್ಕರಿ­ಸುವ ಆಂದೋಲನವನ್ನು ಎಡಗೈ ಮತ್ತು ಬಲಗೈ ಪಂಗಡದ ದಲಿತರು ಒಟ್ಟಾಗಿ ಮಾಡು­ತ್ತೇವೆ. ಲೋಕಸಭಾ ಚುನಾ­ವ­­ಣೆ­­ಯಲ್ಲಿ ಕುರುಬರ ಮತ­ಗಳು ನಿರ್ಣಾ­ಯ­ಕವಲ್ಲ. ದಲಿತರ ಮತ­ಗಳೇ ನಿರ್ಣಾ­­ಯಕ ಎಂಬುದನ್ನು ಸಿದ್ದರಾಮಯ್ಯ ಮನವರಿಕೆ ಮಾಡಿ­ಕೊಳ್ಳ­ಬೇಕು’ ಎಂಬ ಆಗ್ರಹ ಅದರಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry