ಪರವಾನಗಿ ನವೀಕರಣಕ್ಕೆ ಬಿಬಿಎಂಪಿ ಸೂಚನೆ

7

ಪರವಾನಗಿ ನವೀಕರಣಕ್ಕೆ ಬಿಬಿಎಂಪಿ ಸೂಚನೆ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪಾರ- ವಹಿವಾಟು ನಡೆಸುತ್ತಿರುವ ಮಳಿಗೆದಾರರು ಫೆ. 29ರೊಳಗೆ 2012-13ನೇ ಆರ್ಥಿಕ ವರ್ಷದ ವ್ಯಾಪಾರ ಪರವಾನಗಿ ನವೀಕರಿಸಿಕೊಳ್ಳಬಹುದಾಗಿದೆ.ಮಾರ್ಚ್ 1ರಿಂದ 31ರವರೆಗೆ ವ್ಯಾಪಾರ ಪರವಾನಗಿ ನವೀಕರಿಸಿಕೊಳ್ಳುವವರು ಶುಲ್ಕ ಮೊತ್ತದ ಶೇ 25ರಷ್ಟನ್ನು ದಂಡದ ರೂಪದಲ್ಲಿ ತೆರಬೇಕಾಗುತ್ತದೆ. ಏಪ್ರಿಲ್ 1ರಿಂದ ಜೂನ್ 30ರವರೆಗೆ ಪರವಾನಗಿ ನವೀಕರಿಸಿಕೊಳ್ಳುವವರು ಶೇ 100ರಷ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.ಪರವಾನಗಿ ನವೀಕರಣ ಕೇಂದ್ರಗಳು: ಪಾಲಿಕೆಯ ಎಲ್ಲ ಆರೋಗ್ಯಾಧಿಕಾರಿಗಳ ಕಚೇರಿ; ಉಪ ಆರೋಗ್ಯಾಧಿಕಾರಿಗಳ ಕಚೇರಿ; ಸಹಾಯಕ ನಿರ್ದೇಶಕರ (ಪಶುಸಂಗೋಪನೆ) ಕಚೇರಿ; ಕೆ.ಜಿ.ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ; ಆರ್.ವಿ. ರಸ್ತೆಯಲ್ಲಿರುವ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್; ಶೇಷಾದ್ರಿಪುರದಲ್ಲಿರುವ ಕರ್ನಾಟಕ ಪ್ರದೇಶ ಹೋಟೆಲ್ಸ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್; ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್‌ಕುಮಾರ್ ಗಾಜಿನ ಮನೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ- ಆರೋಗ್ಯಾಧಿಕಾರಿಗಳು (ಪೂರ್ವ ವಲಯ)- 2297 5850; ಪಶ್ಚಿಮ ವಲಯ- 2297 5650; ದಕ್ಷಿಣ ವಲಯ- 2297 5750; ಬೊಮ್ಮನಹಳ್ಳಿ ವಲಯ- 2573 6702; ಯಲಹಂಕ ವಲಯ- 2362 6443; ರಾಜರಾಜೇಶ್ವರಿನಗರ ವಲಯ- 2272 3158; ದಾಸರಹಳ್ಳಿ ವಲಯ- 2297 5909; ಮಹದೇವಪುರ ವಲಯ- 2851 0864.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry