ಪರಸ್ವರ ಸಹಾಯ ಮಾಡುವುದೇ ನಿಜವಾದ ಧರ್ಮ

ಭಾನುವಾರ, ಮೇ 26, 2019
27 °C

ಪರಸ್ವರ ಸಹಾಯ ಮಾಡುವುದೇ ನಿಜವಾದ ಧರ್ಮ

Published:
Updated:

ಜಮಖಂಡಿ: ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ. ಸಮಸ್ತ ಪ್ರಾಣಿ ಕುಲವನ್ನು ದಯೆಯಿಂದ ನೋಡುವುದು ಮತ್ತು ಪರಸ್ಪರ ಸಹಾಯ ಮಾಡುವುದು ನಿಜವಾದ ಧರ್ಮ ಎಂದು ಬಾಲಯೋಗಿ ಆಚಾರ್ಯರತ್ನ ಮುನಿಕುಲ ರತ್ನಭೂಷಣ ಮಹಾರಾಜರು ನುಡಿದರು.ತಾಲ್ಲೂಕಿನ ಹಳಿಂಗಳಿ ಗ್ರಾಮದ ಸಮಸ್ತ ದಿಗಂಬರ ಜೈನ ಸಮಾಜ ಸಂಘಟಿಸಿದ್ದ ದ್ವಾದಶ ವರ್ಷಿಯ ಸರ್ವೋದಯ ಪಾವನ ವರ್ಷಯೋಗ ಪರ್ವರಾಜ ಪರ್ಯೂಷಣ ಪೂಜಾ ಮಹೋತ್ಸವದ  ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಸೌಧರ್ಮ ಇಂದ್ರ-ಇಂದ್ರಾಣಿ ಮಹಾವೀರ ನಿಂಗಪ್ಪ ಕೊಟ್ಟಲಗಿ ಧ್ವಜಾರೋಹಣ ನೆರವೇರಿಸಿದರು. ತೇರದಾಳ ಶಾಸಕ ಸಿದ್ದು ಸವದಿ ಮೆರವಣಿಗೆಗೆ ಚಾಲನೆ ನೀಡಿದರು.ವಿಜಾಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಕೆಎಂಎಫ್ ಅಧ್ಯಕ್ಷ ಪಿ.ಟಿ.ಪಾಟೀಲ, ಜಿ.ಪಂ. ಮಾಜಿ ಸದಸ್ಯ ದೇವಲ ದೇಸಾಯಿ, ಜಿ.ಪಂ. ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ತಾ.ಪಂ. ಮಾಜಿ ಸದಸ್ಯ ಬಿ.ಬಿ. ವೆಂಕಟಾಪುರ, ತಹಸೀಲ್ದಾರ ಡಾ.ಸಿದ್ದು ಹುಲ್ಲೋಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.24 ತೀರ್ಥಂಕರ ಪಾಲಕಿ, 24ದೀಕ್ಷಾವೃಕ್ಷ, 24 ತೀರ್ಥಂಕರರ ಧ್ವಜ, 48 ಚಾಮರ, ಆನೆ, ಸೌಧರ್ಮ ಇಂದ್ರ-ಇಂದ್ರಾಣಿಯರ ಭವ್ಯ ಮೆರವಣಿಗೆ ಗ್ರಾಮದಲ್ಲಿ ಜರುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry