ಪರಾಮರ್ಶನ ಕೈಪಿಡಿಯ ಚರ್ಚೆ

ಗುರುವಾರ , ಜೂಲೈ 18, 2019
27 °C
ಹೆಲನ್ ಕೆಲ್ಲರ್ ದಿನಾಚರಣೆ,

ಪರಾಮರ್ಶನ ಕೈಪಿಡಿಯ ಚರ್ಚೆ

Published:
Updated:

ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಅಂಧರ ಸಂಸ್ಥೆ ಹಾಗೂ ಸ್ವಯಂಸೇವಾ ಸಂಘಸಂಸ್ಥೆಗಳ ಸಹಯೋಗದಲ್ಲಿ ಹೆಲನ್ ಕೆಲ್ಲರ್ ದಿನದ ಅಂಗವಾಗಿ ದೃಷ್ಟಿ ಮತ್ತು ಶ್ರವಣ ಸಮಸ್ಯೆ ಹೊಂದಿರುವವರ ದುಂಡು ಮೇಜಿನ ಚರ್ಚೆಯನ್ನು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಏರ್ಪಡಿಸಲಾಯಿತು.

ಇದೇ ಸಂದರ್ಭದಲ್ಲಿ ದೃಷ್ಟಿಹೀನರು ಮತ್ತು ಕಿವುಡರಿಗಾಗಿ ಪರಾಮರ್ಶನ ಕೈಪಿಡಿ ಸಿದ್ಧಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಸರ್ವಶಿಕ್ಷಾ ಅಭಿಯಾನ, ಶೀಲಾ ಕೊತ್ವಾಲ ಇನ್ ಸ್ಟಿಟ್ಯೂಟ್ ಫಾರ್ ದಿ ಡೆಫ್, ಡಾ. ಚಂದ್ರಶೇಖರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಚೆಶೈರ್ ಡಿಸೆಬಿಲಿಟಿ ಟ್ರಸ್ಟ್ ದುಂಡು ಮೇಜಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಇಲ್ಲಿ ನಡೆದ ಚರ್ಚೆಯು ಜನಜಾಗೃತಿ ಹೆಚ್ಚಿಸುವುದಕ್ಕಾಗಿ ನಿಯಮಾವಳಿಗಳ ನಿರೂಪಣೆ, ಸುಧಾರಿತ ಸಂವಹನ ಮತ್ತು ಜಾಲದ ಮೂಲಕ ಜ್ಞಾನದ ಹಂಚಿಕೆ, ಕಾನೂನಿನ ಚೌಕಟ್ಟಿನ ಸುಧಾರಣೆ, ದೃಷ್ಟಿಹೀನರು ಮತ್ತು ಕಿವುಡರ ಪಾಲ್ಗೊಳ್ಳುವಿಕೆ ಮತ್ತು ಪುನರ್ವಸತಿ ಹಾಗೂ ಸಾಮರ್ಥ್ಯ ನಿರ್ಮಾಣಕ್ಕೆ ಉತ್ತೇಜನ ಮತ್ತಿತರ ವಿಚಾರಗಳಿಗೆ ಕೇಂದ್ರೀಕೃತವಾಗಿತ್ತು.

`ಕಿವುಡರು, ದೃಷ್ಟಿಹೀನರಿಗಾಗಿ ದುಡಿಯುತ್ತಿರುವ ಸಮಾನ ಮನಸ್ಕ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ಜತೆಗೆ, ದೃಷ್ಟಿಹೀನ ಮತ್ತು ಕಿವುಡು ಸಮಸ್ಯೆಯುಳ್ಳವರ ತಿಳುವಳಿಕೆಯನ್ನು ಹಂಚಿಕೊಳ್ಳುವ ಹಾಗೂ ಈ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪರಾಮರ್ಶನ ಕೈಪಿಡಿಯನ್ನು ರಚಿಸುವ ಮೂಲಕ ಹೆಲೆನ್ ಕೆಲ್ಲರ್ ದಿನವನ್ನು ಆಚರಿಸುವುದು ಒಂದು ಉತ್ತಮ ಕೆಲಸ' ಎಂದು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞರಾದ ಪದ್ಮಾವತಿ ಹೇಳಿದರು. ಬೆಂಗಳೂರು ಡಿಪಿಐನ ಡೆಪ್ಯೂಟಿ ಡೈರೆಕ್ಟರ್ ಫಾರ್ ಪಬ್ಲಿಕ್ ಇನ್‌ಸ್ಟ್ರಕ್ಷನ್ಸ್ (ಡಿಡಿಪಿಐ), ಸಹಾಯಕ ಪ್ರಾಜೆಕ್ಟ್ ಸಂಚಾಲಕಿ ಪ್ರೇಮಲತಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry