ಭಾನುವಾರ, ಜೂನ್ 20, 2021
26 °C

ಪರಾವಲಂಬಿಯಾಗಬೇಡಿ: ಸಾಹಿತಿ ಡಾ. ಕಂಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಾವಲಂಬಿಯಾಗಬೇಡಿ: ಸಾಹಿತಿ ಡಾ. ಕಂಬಾರ

ಗುಲ್ಬರ್ಗ: `ನಿಮ್ಮ ಉದ್ಧಾರವನ್ನು ನೀವೇ ಮಾಡಿಕೊಳ್ಳಬೇಕು; ಪರಾವಲಂಬಿಯಾಗಬೇಡಿ. ಸರ್ಕಾರದ ಮೇಲಾಗಲಿ, ರಾಜಕೀಯ ವ್ಯಕ್ತಿಗಳ ಮೇಲಾಗಲಿ ಭರವಸೆ ಇಟ್ಟುಕೊಳ್ಳಬೇಡಿರಿ~ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ್ ಕಂಬಾರ ಅವರು ಮಂಗಳವಾರ ಇಲ್ಲಿ ಕಮ್ಮಾರ ಸಮಾಜದ ಬಂಧುಗಳಿಗೆ ಸಲಹೆ ನೀಡಿದರು.ಶೇಖ್ ರೋಜಾದ ಗುರುಶಾಂತಲಿಂಗೇಶ್ವರ ಕಡಂಗಂಚಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಕಮ್ಮಾರ ಸಂಘದ ಜಿಲ್ಲಾ ಘಟಕವು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.`ನಿಮ್ಮದು ಸ್ವಾಭಿಮಾನದ ಬದುಕು. ಕುಲುಮೆಯ ಮುಂದೆ ಕುಳಿತು ಕಬ್ಬಿಣ ಬಡಿಯುವ ಮೂಲಕ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿರಿ~ ಎಂದರು.ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ, ಕಮ್ಮಾರ ಸಮಾಜ ಅಲೆಮಾರಿ ಜನಾಂಗವಾಗಿದೆ. ಇವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಯಾವುದೇ ಭದ್ರತೆಯಿಲ್ಲ. ಮುಖ್ಯವಾಗಿ ಹೊಸ ಜಗತ್ತಿನೊಂದಿಗೆ ಬೆರೆತು ಬಾಳುವ ಅವಕಾಶವೆ ಸಿಕ್ಕಿಲ್ಲ ಎಂದರು. ಶಹಾ ಬಜಾರ್ ಲಾಲ ಹನುಮಂತ ದೇವಸ್ಥಾನದಿಂದ ಕಡಂಗಂಚಿ ಕಲ್ಯಾಣ ಮಂಟಪದವರೆಗೂ ಡಾ. ಚಂದ್ರಶೇಖರ್ ಕಂಬಾರ ಅವರನ್ನು ಕುಂಭಮೇಳದ ಮೂಲಕ ಕರೆತರಲಾಯಿತು.ರಮೇಶ ಲೋಹಾರ, ತಿಪ್ಪಣ್ಣ ಲೋಹಾರ, ಅರವಿಂದ ಎಸ್. ನರೋಣಿ, ಅಣ್ಣಪ್ಪಾ ಕಂಬಾರ, ನಂದೇಶ ಕಂಬಾರ, ಶರಣಪ್ಪ ಬಡಿಗೇರ ಮಾತನಾಡಿದರು. ರಮೇಶ ಆಳಂದ, ಸಿದ್ಧರಾಮ ಖಜೂರಿ, ಮಲ್ಲಿಕಾರ್ಜುನ ಕಲಬುರ್ಗಿ, ರಾಯಪ್ಪಾ ಕಲಬುರ್ಗಿ, ಶಿವಲಿಂಗಪ್ಪ ಪಟ್ಟಣ, ಸಿದ್ದಣ್ಣ ಮೇಳಕುಂದಿ, ಶಾಂತಪ್ಪ ಮಾದನಹಿಪ್ಪರಗಾ, ಅರವಿಂದ ಉಡ್ಚಾಣ, ಹೊನ್ನಪ್ಪ ಭಾಸಗಿ, ಸಂತೋಷ ಮಳ್ಳಿ, ಶಿವಶಂಕರ ಜೇವರ್ಗಿ, ಮಹಾಂತೇಶ ಜೇವರ್ಗಿ, ಶರಣಬಸಪ್ಪಾ ಹರವಾಳ, ದೇವಿಂದ್ರ ಮಳ್ಳಿ, ಪಾಂಡುರಂಗ ಕಲಬುರ್ಗಿ, ಕಲ್ಯಾಣಿ ರೇವೂರ, ಬಾಪುರಾವ ನಿಂಬರ್ಗಾ, ಶಂಕರ ಬಗಲೂರು, ದೇವಿಂದ್ರ ಸಿಂದಗಿ, ರಮೇಶ ಇಂಡಿ, ಮಹಾದೇವ ಇತರರು ಹಾಜರಿದ್ದರು.ನಿಂಗಣ್ಣ ಮಾಡ್ಯಾಳ ಸ್ವಾಗತಿಸಿದರು. ಶರಣಬಸಪ್ಪ ಮದಗುಣಕಿ ನಿರೂಪಿಸಿದರು. ಭೀಮರಾಯ ಕಂಬಾರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.