ಮಂಗಳವಾರ, ಏಪ್ರಿಲ್ 13, 2021
23 °C

ಪರಿಣಿತಾ ಪಲ್ಲಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಕಾಲದಲ್ಲಿ 36 ಇಂಚು ಸೊಂಟದಳತೆಯ ಜೀನ್ಸ್ ಪ್ಯಾಂಟ್ ತೊಡುತ್ತಿದ್ದ, ನಟಿಯಾಗುವ ಸಣ್ಣ ಕನಸ್ಸನ್ನೂ ಇಟ್ಟುಕೊಳ್ಳದ ಪರಿಣಿತಿ ಚೋಪ್ರಾ ಈಗ ಸಪೂರವಾಗಿದ್ದಾರೆ.ಊಟದ ಪ್ರೀತಿ ಕಡಿಮೆಯಾಗದಿದ್ದರೂ ತಿನ್ನುವ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಎಲ್ಲಾ `ಯಶ್ ರಾಜ್ ಬ್ಯಾನರ್‌ನ ಮಹಿಮೆ~ ಎನ್ನುವ ಅವರಿಗೆ ಈಗ ಅಕ್ಕನ ಹಾದಿಯಲ್ಲೇ ನಡೆಯುವ ಬಯಕೆ. ಅಂದಹಾಗೆ, ಅವರ ಅಕ್ಕ ಅರ್ಥಾತ್ ಕಸಿನ್ ಪ್ರಿಯಾಂಕಾ ಚೋಪ್ರಾ.`ನನಗೆ ನಟಿಯಾಗುವ ಆಸೆ ಇರಲಿಲ್ಲ. ಆದರೆ ಈಗ ಅದೇ ಜೀವನದ ಮುಖ್ಯ ಗುರಿ. ನಟಿಯಾದರೆ ಖಾಸಗೀ ಬದುಕು ಕಷ್ಟ. ಅದನ್ನು ಅರಿತಿರುವ ನಾನು ಸಮತೋಲಿತ ರೀತಿಯಲ್ಲಿ ಹೆಜ್ಜೆ ಇಡಲು ನಿರ್ಧರಿಸಿದ್ದೇನೆ~ ಎನ್ನುತ್ತಾರೆ ಪರಿಣಿತಿ. `ಯಶ್ ರಾಜ್ ಫಿಲ್ಮ್ಸ್ ಅಡಿ ಕೆಲಸ ಮಾಡಿದಾಗ ನಟನೆ ಎಂದರೇನು, ಯಾಕೆ ಒಬ್ಬ ನಟನಿಗೆ ಅಷ್ಟು ಬೇಡಿಕೆ ಇದೆ ಎಂಬ ಸತ್ಯ ಅವರಿಗೆ ಗೊತ್ತಾಯಿತು. ಕ್ಯಾಮೆರಾ ಮುಂದೆ ನಿಲ್ಲುವ ಮೊದಲು ಹೇಗೆ ಸಿದ್ಧರಾಗಬೇಕು ಎಂಬುದರ ಬಗ್ಗೆ ಗೊತ್ತಾದದ್ದೂ ಆಗಲೇ. ಸೃಜನಶೀಲತೆ ಎಷ್ಟು ಕಷ್ಟ ಎಂಬುದು ಜ್ಞಾನೋದಯವಾದ ಬೋಧಿವೃಕ್ಷ ಯಶ್ ರಾಜ್ ಬ್ಯಾನರ್.ಸೋದರಿ ಪ್ರಿಯಾಂಕಾ ಅಂದರೆ ಪರಿಣಿತಿಗೆ ಬಲು ಮೆಚ್ಚು. `ಅವಳ ಅಭಿನಯ ಚೆನ್ನಾಗಿದೆ. ಬರ್ಫಿ ಸಿನಿಮಾ ತುಂಬಾ ಇಷ್ಟವಾಗಿತ್ತು. ಅದನ್ನು ನೋಡಿದ ನಂತರ ನಾನು ಕೂಡ ರಾಣಿ ಮುಖರ್ಜಿ, ಕಾಜೋಲ್ ಹಾಗೂ ಅಕ್ಕನಂತೆಯೇ ನಟನೆಯಲ್ಲಿ ಪಳಗಬೇಕು ಎನ್ನಿಸಿತು. ಅಂದೇ ಉತ್ತಮ ನಟಿಯಾಗಬೇಕು ಎಂದು ಸಂಕಲ್ಪ ಮಾಡಿದೆ~ ಎನ್ನುವ ಪರಿಣಿತಿ ಆಹಾರ ಪ್ರಿಯೆ. ಬಾಯಿರುಚಿಗೆ ತಕ್ಕ ಎಲ್ಲವನ್ನೂ ಸವಿಯುವ ಅವರು ಮೊದಲು ಡಯೆಟ್ ಮಾಡುತ್ತಿರಲಿಲ್ಲವಂತೆ.ಈಗ ದೇಹತೂಕವನ್ನು ಕಳೆದುಕೊಳ್ಳಲೇಬೇಕಾದ ಜರೂರು ಇರುವುದರಿಂದ, ಸೇವಿಸುವ ಆಹಾರದ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸದ್ಯಕ್ಕೆ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿರುವ ಪರಿಣಿತಾ ತಾವಿನ್ನೂ ಪಳಗಬೇಕು ಎಂಬ ಸತ್ಯವನ್ನೂ ವಿನಯದಿಂದಲೇ ಹೇಳಿಕೊಳ್ಳುತ್ತಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.