ಪರಿನಿರ್ವಾಣ ದಿನ: ಸಂವಿಧಾನ ಶಿಲ್ಪಿಗೆ ನಮನ

7

ಪರಿನಿರ್ವಾಣ ದಿನ: ಸಂವಿಧಾನ ಶಿಲ್ಪಿಗೆ ನಮನ

Published:
Updated:

ಚಿಕ್ಕಮಗಳೂರು: ನಗರದಲ್ಲಿ ಗುರುವಾರ ವಿವಿಧ ಪಕ್ಷ  ಮತ್ತು ವಿದ್ಯಾರ್ಥಿ ಸಂಘಟನೆಗಳು  ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 57ನೆಯ ಮಹಾಪರಿನಿರ್ವಾಣ ದಿನವನ್ನು ಗುರುವಾರ ಆಚರಿಸಲಾಯಿತು.ಬಹುಜನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ನಗರದ ಹಳೇ ತಾಲ್ಲೂಕು ಕಚೇರಿ ಆವರಣದಿಂದ ಮೆಣದಬತ್ತಿಯೊಂದಿಗೆ ಮೆರವಣಿಗೆ ಹೊರಟು ಎಂ.ಜಿ.ರಸ್ತೆಯಲ್ಲಿ ಸಾಗಿ ಆಜಾದ್ ವೃತ್ತ  ತಲುಪಿದರು.ಹಾಸ್ಟೆಲ್ ವಿದ್ಯಾರ್ಥಿಗಳ ಒಕ್ಕೂಟ:  ಒಕ್ಕೂ ಟದ ವತಿಯಿಂದ ವಿದ್ಯಾರ್ಥಿನಿಲಯದ ವಿದ್ಯಾರ್ಥಿ ಗಳು ಆಜಾದ್ ವೃತ್ತದಲ್ಲಿ ಮೇಣದ ಬತ್ತಿಯನ್ನು ಹಚ್ಚುವ ಮೂಲಕ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಆಚರಿಸಿದರು.ಅಂಬೇಡ್ಕರ್ ಕುರಿತು ವಿದ್ಯಾರ್ಥಿ ಮುಖಂಡರು ಮಾತನಾಡಿದರು.ಜೆಡಿಎಸ್ ಕಚೇರಿ: ಜಾತ್ಯತೀತ ಜನತಾದಳದ ಕಚೇರಿಯಲ್ಲಿ ಅಂಬೇಡ್ಕರ್ ಪುಣ್ಯತಿಥಿಯನ್ನು ಆಚರಿಸಲಾಯಿತು. ಜನತಾದಳ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಪರಿಶಿಷ್ಟಜಾತಿ ವಿಭಾಗದ ಜಿಲ್ಲಾಧ್ಯಕ್ಷ ಹಂಪಯ್ಯ, ಮಾಜಿ ಶಾಸಕ ಎಸ್.ಎಲ್.ಧರ್ಮೇ ಗೌಡ ,ವಿಭಾಗದಮುಖಂಡ ಹುಣಸೆ ಮಕ್ಕಿ ಲಕ್ಷ್ಮಣ್ ಮಾತನಾಡಿದರು. ವಿಭಾಗದ ಮುಖಂಡರಾದ ಪದ್ಮಯ್ಯ, ನಗರಸಭಾ ಸದಸ್ಯ ದೇವಿಪ್ರಸಾದ್,  ದುರ್ಗೇಶ್, ಪಕ್ಷದ ಮುಖಂಡರಾದ ಮಂಜಪ್ಪ, ಕೃಷ್ಣೇಗೌಡ, ಎಂ.ಡಿ.ರಮೇಶ್ ಯು.ಡಿ.ರಮೇಶ್ ಜ್ಯೋತಿ ಈಶ್ವರ್, ಚಂದಯ್ಯ, ಬಾಲ ಕೃಷ್ಣೇಗೌಡ, ಉಮಾಪತಿ, ಅಶೋಕ್ ಇದ್ದರು.ದ.ಸಂ.ಸ: ನಗರದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷಸಮಿತಿ ಜಿಲ್ಲಾ ಶಾಖೆವತಿಯಿಂದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು  ದ.ಸಂ.ಸ ಮಾಜಿ ಜಿಲ್ಲಾ ಸಂಚಾಲಕ ಕಲ್ಲಯ್ಯ ಉದ್ಘಾಟಿಸಿ ದರು. ಶಿಕ್ಷಕ ನಂಜುಂಡಯ್ಯ, ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಮೀನಾಕ್ಷಿ ಮಾತನಾಡಿದರು. ತಾಲ್ಲೂಕು ಸಂಚಾಲಕಿ ರಿಹಾನಾ, ಜಿಲ್ಲಾ ಸಂಘಟನಾ ಸಂಚಾಲಕರಾದ ಚೌಡಪ್ಪ, ಅಣ್ಣಯ್ಯ, ಹೇಮಂತ್ ಪ್ರಭು, ಅಬ್ದುಲ್ ರೆಹಮಾನ್, ತರೀಕೆರೆ ತಾಲ್ಲೂಕು ಸಂಚಾಲಕ ಹೆಚ್.ಬಿ.ಬಾಲರಾಜ್, ನೌಕರರ ಒಕ್ಕೂಟದ ಜಿಲ್ಲಾದ್ಯಕ್ಷ ಭೀಮಯ್ಯ, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ರಘು, ತುಳಸಮ್ಮ, ಸುಮಿತ್ರಮ್ಮ ಕಡೂರು ತಾಲ್ಲೂಕು ಸಂಚಾಲಕ ಎಂ.ಟಿ.ಶ್ರೀನಿವಾಸ್,  ತಾಲ್ಲೂಕು ಸಂಚಾಲಕ ದೊಡ್ಡಯ್ಯಶ್ರೀ ಗಂಗಾ ಪ.ಜಾತಿ ಮತ್ತು ವರ್ಗದ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ವಿ.ಧರ್ಮೇಶ್ ಹಾಜರಿದ್ದರು.ಕಾಂಗ್ರೆಸ್: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣವನ್ನು ಪರಿಶಿಷ್ಟಜಾತಿ ಮತ್ತು ಪಂಗಡ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ್ ಅಧ್ಯಕ್ಷತೆಯಲ್ಲಿ ಆಚರಿಸ ಲಾಯಿತು. ದಂಟರಮಕ್ಕಿಯ ಹಿರಿಯ ಕಾಂಗ್ರೆಸ್ ಮುಖಂಡ ಸಿದ್ಧಯ್ಯ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಮಹಮ್ಮದ್‌ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಉಪಾಧ್ಯಕ್ಷ ಕೋಟೆ ಆನಂದ್, ವಿಭಾಗದ ಮುಖಂಡರಾದ ರಾಜಣ್ಣ, ಧರ್ಮಯ್ಯ, ಬಸವರಾಜು, ಆಲ್ದೂರು ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್, ಲೋಕೇಶ್,ಮಂಜೇಗೌಡ ಇದ್ದರು.ಬಿಎಸ್‌ಪಿ:ಬಹುಜನ ಸಮಾಜ ಪಕ್ಷದ ವತಿಯಿಂದ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಮುಖಂಡ ಜಿ.ಕೆ. ಬಸವರಾಜು  ದೀಪ ಬೆಳಗಿಸಿದರು. ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಮುಖಂಡರಾದ ಈಶ್ವರ್, ಹರೀಶ್, ರಾಮನಹಳ್ಳಿ ಕುಮಾರ್, ಬೊಂಬೈಲು ಉಮೇಶ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry