ಸೋಮವಾರ, ಆಗಸ್ಟ್ 26, 2019
20 °C

ಪರಿಮಾರ್ಜನ್ ಚಾಂಪಿಯನ್

Published:
Updated:

ಕೂಪನ್‌ಹೇಗನ್, ಡೆನ್ಮಾರ್ಕ್ (ಪಿಟಿಐ): ಭಾರತದ ಪರಿಮಾರ್ಜನ್ ನೇಗಿ ಇಲ್ಲಿ ನಡೆದ ಪಾಲಿಟಿಕೆನ್ ಕಪ್-2013 ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.ಆಡಿದ 10 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿ ನವದೆಹಲಿ ಮೂಲದ ನೇಗಿ ಈ ಸಾಧನೆ ಮಾಡಿದ್ದಾರೆ. ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡವು. ಭಾರತದ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಎನಿಸಿರುವ ಅವರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ಆಟಗಾರರನ್ನು ಮಣಿಸಿದ್ದಾರೆ. ಈ ಗೆಲುವಿನಿಂದಾಗಿ ನೇಗಿ ಅವರ ಇಎಲ್‌ಒ ಪಾಯಿಂಟ್ 2660ರ ಗಡಿ ದಾಟಿದೆ. ಅವರು 2009ರಲ್ಲೂ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು.

Post Comments (+)