ಮಂಗಳವಾರ, ಜೂನ್ 22, 2021
23 °C

ಪರಿವರ್ತನೆಯಿಂದ ಸಾಮರಸ್ಯ: ರಂಭಾಪುರಿ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಮನಪರಿವರ್ತನೆಯಿಂದ ಮಾತ್ರ ಸಮಾಜ­ದಲ್ಲಿ ಶಾಂತಿ ಸಾಮರಸ್ಯ ಮೂಡಿ ಬರಲು ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿಈಚೆಗೆ ಜರುಗಿದ ರಥೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಎಲ್ಲರಿಗಾಗಿ ತಾನು ಎನ್ನುವುದು ಧರ್ಮ. ಎಲ್ಲರೂ ತನಗಾಗಿ ಅನ್ನುವುದು ಅಧರ್ಮ. ಅಶಾಂತಿ, ಅಸತ್ಯ, ಅನಾಗರಿಕ ವರ್ತನೆಯಿಂದ ತಲ್ಲಣಿಸುತ್ತಿರುವ ಇಂದಿನ ದಿನಗಳಲ್ಲಿ ಎಲ್ಲರಲ್ಲೂ ಸಾಮರಸ್ಯ ಬೆಳೆದು ಬರಬೇಕಾದುದು ಅಗತ್ಯವಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನಾ ಕಾರ್ಯ ಭರದಿಂದ ಸಾಗಿದೆ. ಈ ಮಹತ್‌ ಕಾರ್ಯಕ್ಕೆ ರಂಭಾಪುರಿ ಜಗದ್ಗುರುಗಳೂ ಕೈ ಜೋಡಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಕಾರ್ಯ ನೆರವೇರಲಿದೆ. ಕಾರಣ ಭಕ್ತರು ಶಿವಲಿಂಗಗಳನ್ನು ದಾನ ಮಾಡಲು ಮುಂದೆ ಬರಬೇಕು ಎಂದು ಸೂಚಿಸಿದರು. ಅಧ್ಯಕ್ಷತೆ ವಹಿಸಿದ್ದ ಕಲಾ­ದಗಿ ಪಂಚಗ್ರಹ ಹಿರೇಮಠದ ಚಂದ್ರಶೇಖರ ಸ್ವಾಮೀಜಿ  ಮಾತನಾಡಿದರು.ಬಂಕಾಪುರದ ರೇವಣಸಿದ್ಧ ಶಿವಾಚಾರ್ಯರು,  ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು,  ಎಮ್ಮಿಗನೂರಿನ ವಾಮದೇವ ಮಹಂತ ಶಿವಾ­ಚಾರ್ಯರು, ಅಬ್ಬಿಗೇರಿಯ ಸೋಮಶೇಖರ ಶಿವಾ­ಚಾರ್ಯರು, ಮುತ್ತತ್ತಿ. ಬಿಲ್‌ಕೆರೂರು, ಕರೆವಾಡಿ­ಮಠದ ಶ್ರೀಗಳು ಹಾಜರಿದ್ದರು. ಬಸಣ್ಣ ಮಲ್ಲಾಡದ, ನಾಗಪ್ಪ ಡೊಣ್ಣಿ, ಎಸ್‌.ಪಿ. ಬಳಿಗಾರ, ಶಂಭಯ್ಯ ಹಿರೇಮಠ, ಚಂದ್ರು ಬಾಳಿಹಳ್ಳಿಮಠ ಮಾತನಾಡಿದರು. ಗುರುಪಾದಯ್ಯ ಸಾಲಿಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.