ಪರಿವಾರಕ್ಕೆ ಪುರಸ್ಕಾರ

7

ಪರಿವಾರಕ್ಕೆ ಪುರಸ್ಕಾರ

Published:
Updated:

ಸುವರ್ಣ ಪರಿವಾರದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ಇತರೆ ಸದಸ್ಯರು ಒಂದೆಡೆ ನೆರೆದ ರಸಸಂಜೆ ‘ಸುವರ್ಣ ಪರಿವಾರ ಅವಾರ್ಡ್ಸ್ -೨೦೧೩’ ಕಾರ್ಯಕ್ರಮ ಸೆ.14 ಮತ್ತು ೧೫ರಂದು ಸುವರ್ಣ ವಾಹಿನಿಯಲ್ಲಿ ಬಿತ್ತರಗೊಳ್ಳಲಿದೆ.ಸುವರ್ಣ ಪರಿವಾರದ ತಾರೆಗಳಾದ ಅಮೃತ-ವಿಜಯ್, ನಂದಿನಿ-ಕಿಶೋರ್, ಆಕಾಶ್-ದೀಪಾ, ಚುಕ್ಕಿ, ಮೈಲಾರಿ-ರೇಣುಕಾ, ಮೀನಾನಾಥ್ ಮೊದಲಾದವರ ನೃತ್ಯ, ನಾಟಕ ಪ್ರದರ್ಶನಗಳು ಈ ಕಾರ್ಯಕ್ರಮದ ವಿಶೇಷಗಳಾಗಿವೆ. ಹೇಮಾ ಚೌಧರಿ, ವನಿತಾವಾಸು, ಮೊದಲಾದ ಹಿರಿಯ ಕಲಾವಿದರು ಕೂಡ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದ್ದಾರೆ.ಒಟ್ಟು ೩೨ ವಿಭಾಗಗಳಲ್ಲಿ ಸುವರ್ಣ ಪರಿವಾರ್ ಪುರಸ್ಕಾರಗಳನ್ನು ನೀಡಲಾಗಿದೆ. ಇವುಗಳಲ್ಲಿ ನೆಚ್ಚಿನ ಧಾರಾವಾಹಿ ಪ್ರಶಸ್ತಿ ‘ಅಮೃತ ವರ್ಷಿಣಿ’ಗೆ ದೊರೆತಿದ್ದರೆ, ನೆಚ್ಚಿನ ಪತಿ-ಪತ್ನಿ ಜೋಡಿಯಾಗಿ ಅಮೃತ-ವಿಜಯ್ (ಅಮೃತವರ್ಷಿಣಿ) ಆಯ್ಕೆಯಾಗಿದ್ದಾರೆ.ನೆಚ್ಚಿನ ನಟಿಯಾಗಿ ಅಮೃತ (ಅಮೃತವರ್ಷಿಣಿ), ಹಾಸ್ಯ ನಟನಾಗಿ ಮೀನಾನಾಥ್ (ಪಂಚರಂಗಿ ಪೊಂ ಪೊಂ), ನೆಚ್ಚಿನ ಕಲಾವಿದನಾಗಿ ಆಕಾಶ್ (ಆಕಾಶದೀಪ) ಪುರಸ್ಕೃತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry