ಪರಿಶಿಷ್ಟರಿಗೆ ಅನ್ಯಾಯ

7

ಪರಿಶಿಷ್ಟರಿಗೆ ಅನ್ಯಾಯ

Published:
Updated:

ಸಾರ್ವಜನಿಕ ಶಿಕ್ಷಣ ಇಲಾಖೆ 2001-02ನೇ ಸಾಲಿನಲ್ಲಿ ಅಂಕಗಳ ಆಧಾರದ ಮೇಲೆ ವಿಭಾಗ ಮಟ್ಟದಲ್ಲಿ ಸರ್ಕಾರಿ ಪ್ರೌಢ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಂಡಿತು.

ನೇಮಕಾತಿ ಆದೇಶ ಪಡೆದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಒಂದೆರಡು ದಿನಗಳಲ್ಲಿ ಸೇವೆಗೆ ಹಾಜರಾದರು.ಆದರೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಮತ್ತು ಇತರೆ ವರ್ಗದ ಅಭ್ಯರ್ಥಿಗಳು ಸಿಂಧುತ್ವ ಪ್ರಮಾಣ ಪತ್ರ ಪಡೆದು ಸೇವೆಗೆ ಹಾಜರಾಗಲು ಒಂದು ತಿಂಗಳು ವಿಳಂಬವಾಯಿತು. ನೇಮಕಾತಿ ಆದೇಶಕ್ಕೆ ಅನುಗುಣವಾಗಿ ಇಲಾಖೆ ಜೇಷ್ಠತಾ ಪಟ್ಟಿ ತಯಾರಿಸಲಿಲ್ಲ. ಪರಿಶಿಷ್ಟ ಜಾತಿ ಮತ್ತು ಇತರೆ ಅಭ್ಯರ್ಥಿಗಳು ಸೇವೆಗೆ ಹಾಜರಾದ ದಿನದಿಂದ ಅವರ ಸೇವಾವಧಿಯನ್ನು ಪರಿಗಣಿಸಿತು.ಜೇಷ್ಠತಾ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೊದಲ ಸ್ಥಾನ ಸಿಕ್ಕಿತು.

ಇಲಾಖೆ ಇತ್ತೀಚೆಗೆ ಒಂದು ಆದೇಶ ಹೊರಡಿಸಿ, 20ನೇ ಫೆಬ್ರುವರಿ 2012ಕ್ಕೆ ಸರಿಯಾಗಿ ನಿರಂತರ ಹತ್ತು ವರ್ಷ ಸೇವೆ ಸಲ್ಲಿಸಿದ ಪ್ರೌಢ ಶಾಲಾ ಶಿಕ್ಷಕರಿಗೆ ಶಿಕ್ಷಣ ಅಧಿಕಾರಿಯಾಗಿ ಬಡ್ತಿ ನೀಡಲು ತೀರ್ಮಾನಿಸಿದೆ.ಇದರಿಂದ  ಪರಿಶಿಷ್ಟ ಜಾತಿ ಇತರೆ ಪಂಗಡದ ಶಿಕ್ಷಕರಿಗೆ ಅನ್ಯಾಯವಾಗುತ್ತದೆ. ಅದಕ್ಕೆ ಸರ್ಕಾರ ಅವಕಾಶ ಕೊಡಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry