ಪರಿಶಿಷ್ಟರ ಗಲ್ಲಿಗೆ ಶೀಘ್ರ ಚರಂಡಿ ನಿರ್ಮಾಣ

ಶನಿವಾರ, ಜೂಲೈ 20, 2019
27 °C

ಪರಿಶಿಷ್ಟರ ಗಲ್ಲಿಗೆ ಶೀಘ್ರ ಚರಂಡಿ ನಿರ್ಮಾಣ

Published:
Updated:

ಔರಾದ್: ಪಟ್ಟಣದ ಪರಿಶಿಷ್ಟರ ಗಲ್ಲಿಯಲ್ಲಿ ಉಂಟಾಗಿರುವ ನೈರ್ಮಲ್ಯ ಸಮಸ್ಯೆ ನಿವಾರಿಸಲು ಶೀಘ್ರದಲ್ಲಿ ಚರಂಡಿ ನಿರ್ಮಿಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಜೆ.ಡಿ. ಗುದಗೆನವರ ತಿಳಿಸಿದ್ದಾರೆ.ಈಚೆಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಪರಿಶಿಷ್ಟರ ಗಲ್ಲಿಯಲ್ಲಿ ನೈರ್ಮಲ್ಯ ಸಮಸ್ಯೆ’ ವರದಿಗೆ ಪ್ರತಿಕ್ರಿಯೆ ನೀಡಿದ ಅವರು ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆಯಡಿ ಪಟ್ಟಣದ ವಿವಿಧೆಡೆ ರಸ್ತೆ, ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

 

ಪ್ರತಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಹೀಗಾಗಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಕತ್ತಲೆ ಇರುವ ಕಡೆಗೆ ದೀಪ ಹಾಕಿಸುವ ವ್ಯವಸ್ಥೆಯೂ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry