ಪರಿಶಿಷ್ಟರ ಮೀಸಲಾತಿ ಮೊಟಕು: ಧರಣಿ

ಭಾನುವಾರ, ಜೂಲೈ 21, 2019
27 °C

ಪರಿಶಿಷ್ಟರ ಮೀಸಲಾತಿ ಮೊಟಕು: ಧರಣಿ

Published:
Updated:

ಕೋಲಾರ: ಪರಿಶಿಷ್ಟ ಜಾತಿಗೆ ಕಾದಿರಿಸಲಾಗಿರುವ ಮೀಸಲಾತಿಯನ್ನು ಕ್ರೈಸ್ತಧರ್ಮಕ್ಕೆ ಮತಾಂತರ ಗೊಂಡಿರುವ ದಲಿತರಿಗೆ ನೀಡಬಾರದು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕರ್ತರು ಧರಣಿ ನಡೆಸಿದರು.ಜಸ್ಟೀಸ್ ರಂಗನಾಥ್ ಮಿಶ್ರ ಆಯೋಗವು ದಲಿತ ಕ್ರಿಶ್ಚಿಯನ್ನರಿಗೆ ಮೀಸಲಾತಿ ಶಿಫಾರಸು ಮಾಡಿದೆ. ಆದರೆ ಅದಕ್ಕಾಗಿ, ಸಂವಿಧಾನಬದ್ಧವಾಗಿ ಈಗಾಗಲೇ ಪರಿಶಿಷ್ಟ ಜಾತಿಗೆ ಕಾದಿರಿಸಿರುವ ಮೀಸಲಾತಿ ಪ್ರಮಾಣವನ್ನು ಮೊಟುಕು ಗೊಳಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೀಸಲಾತಿಯನ್ನು ಮೊಟುಕು ಗೊಳಿಸುವುದರಿಂದ ಪರಿಶಿಷ್ಟ ಜಾತಿಯವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಅವಕಾಶಗಳು ಕಡಿಮೆಯಾಗುತ್ತದೆ. ಅದಕ್ಕೆ ಕೇಂದ್ರ ಸರ್ಕಾರ ಆಸ್ಪದ ನೀಡಬಾರದು ಎಂದು ಒತ್ತಾಯಿಸಿದರು.ಹಿಂದೂ ಸಮಾಜವನ್ನು ಒಡೆದು ಮೀಸಲಾತಿ ಯನ್ನು ದುರ್ಬಳಕೆ ಮಾಡಿಕೊಳ್ಳುವ ಸಲುವಾಗಿಯೂ ಮಿಶ್ರಾ ವರದಿಯನ್ನು ಬಳಸುವ ಅಪಾಯವೂ ಇದೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಯವರೂ ಸೇರಿದಂತೆ ದೇಶದ ಜನರು ಜಾಗೃತರಾಗಬೇಕಾಗಿದೆ ಎಂದರು.ಸಿ.ವೆಂಕಟೇಶ್, ಹನುಮಪ್ಪ, ವಿ.ಕೆ. ಚಂದ್ರಶೇಖರ್, ಓಂಶಕ್ತಿ ಚಲಪತಿ, ಶಂಕರಪ್ಪ, ಕೆಂಪಣ್ಣ,  ನಾಗರಾಜ, ರವಿಕುಮಾರ್, ಶಿವು, ವಾಸಿಂ ಅಹ್ಮದ್, ಪಾಪೇಗೌಡ, ಪ್ರಭು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry