ಪರಿಶಿಷ್ಟ ವಿದ್ಯಾರ್ಥಿಗಳ ಸಾಧನೆ

7

ಪರಿಶಿಷ್ಟ ವಿದ್ಯಾರ್ಥಿಗಳ ಸಾಧನೆ

Published:
Updated:

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಜಾತಿ ಆಧಾರದ ಮತ್ತು ತಾರತಮ್ಯದ ಫಲಿತಾಂಶ ಪ್ರಕಟಿಸಲಾಗಿದೆ ಎಂಬ ಗುಂಡಪ್ಪ ಸಿ. ಸಿಂಗೆ ಅವರ (ಪ್ರ.ವಾ. ಫೆ 1) ಆರೋಪ ಸತ್ಯಕ್ಕೆ ದೂರವಾದುದು. ಪರಿಶಿಷ್ಟ ಜಾತಿಯ 12 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಶೇ 70 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.

 

ಹಾಗೆಯೇ ಪರಿಶಿಷ್ಟ ಪಂಗಡದ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಶೇ 70ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ನಡುವೆ ತಾರತಮ್ಯದ  ಆರೋಪಗಳಿದ್ದರೆ ವಿಭಾಗದ ಮುಖ್ಯಸ್ಥರಿಗೆ, ಕುಲಪತಿಗಳಿಗೆ ದೂರು ನೀಡಬಹುದು. ಅಂಥದ್ದೇನಾದರೂ ಕಂಡುಬಂದರೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಕೇಂದ್ರೀಯ ವಿವಿ ವತಿಯಿಂದ ವಿದ್ಯಾರ್ಥಿಗಳನ್ನು ಬೆಂಗಳೂರು, ಗಂಗಾವತಿಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಅನುಭಾವ ಸಾಹಿತ್ಯ, ರವೀಂದ್ರನಾಥ ಟ್ಯಾಗೋರ್ ಸಾಹಿತ್ಯ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳನ್ನು ಏರ್ಪಡಿಸಿತ್ತು. ಇ-ಗವರ್ನನ್ಸ್ ಮತ್ತು ಶಿಕ್ಷಣದಲ್ಲಿ ಹೊಸ ಸಾಧ್ಯತೆಗಳ ಕುರಿತ ಕಮ್ಮಟವನ್ನೂ ಹಮ್ಮಿಕೊಂಡಿತ್ತು.

 

ರಾಷ್ಟ್ರೀಯ-ಅಂತರರಾಷ್ಟ್ರೀಯ ಖ್ಯಾತಿಯ ಹದಿನೈದು ಮಂದಿ  ವಿದ್ವಾಂಸರನ್ನು ಕರೆಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಇದೆಲ್ಲವೂ ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿಯೇ ಹೊರತು ಅವರ ಕನಸುಗಳ ಮೇಲೆ ನೀರೆರಚಲು ಅಲ್ಲ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry