ಶುಕ್ರವಾರ, ಮೇ 7, 2021
25 °C

ಪರಿಶೀಲನೆ ಹಂತದಲ್ಲಿ ಯೋಗೀಶ್ವರ್ ವಿರುದ್ಧದ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಘೋಷಿತ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿರುವ ಆರೋಪದ ಮೇರೆಗೆ ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ಅವರ ವಿರುದ್ಧ ರವೀಂದ್ರ ಬೆಳೆಯೂರು ಎಂಬುವವರು ನೀಡಿರುವ ದೂರು `ಪರಿಶೀಲನೆಯ ಹಂತದಲ್ಲಿದೆ~.ಲೋಕಾಯುಕ್ತದಲ್ಲಿ ದಾಖಲಾಗುವ ಪ್ರಕರಣಗಳ ಕುರಿತು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ ಯೋಗೀಶ್ವರ್ ಅವರ ವಿರುದ್ಧ`ಮೆಗಾಸಿಟಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಲಿಮಿಟೆಡ್‌ನ ನಿವೇಶನ ಸದಸ್ಯರ ಕಲ್ಯಾಣ ಸಂಘ~ದ ಅಧ್ಯಕ್ಷ ರವೀಂದ್ರ ಬೆಳೆಯೂರು ಅವರು ನೀಡಿರುವ ದೂರು `ಪರಿಶೀಲನೆಯ ಹಂತದಲ್ಲಿದೆ.~ ರವೀಂದ್ರ ಅವರು ಇದೇ 16ರಂದು ದೂರು ನೀಡಿದ್ದಾರೆ.ದೂರಿನಲ್ಲೇನಿದೆ?: 2006ರ ಏಪ್ರಿಲ್ 1ರಿಂದ 2007ರ ಮಾರ್ಚ್ 31ರ ನಡುವಿನ ಅವಧಿಯಲ್ಲಿ ತನ್ನ ಆದಾಯ 35.82 ಲಕ್ಷ ರೂಪಾಯಿ ಎಂದು ಯೋಗೀಶ್ವರ್ ಅವರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಅವರು ಇದೇ ಅವಧಿಯಲ್ಲಿ 3.6 ಕೋಟಿ ರೂಪಾಯಿ ಮೊತ್ತದ ಆಸ್ತಿ ಸಂಪಾದಿಸಿದ್ದಾರೆ.

 

ಅಂದರೆ, 3.24 ಕೋಟಿ ರೂಪಾಯಿ ಆಸ್ತಿ ಅವರು ಘೋಷಿಸಿರುವ ಆದಾಯದ ಪ್ರಮಾಣಕ್ಕಿಂತ ಹೆಚ್ಚಿನದ್ದಾಗಿದೆ ಎಂದು ರವೀಂದ್ರ ದೂರಿನಲ್ಲಿ ಆರೋಪಿಸಿದ್ದಾರೆ. 2004ರ ಮಾರ್ಚ್ 27ರಿಂದ 2011ರ ಮಾರ್ಚ್ 1ರ ನಡುವಿನ ಅವಧಿಯಲ್ಲಿ ಅವರ ಒಟ್ಟು ಆಸ್ತಿ 11.09 ಕೋಟಿ ರೂಪಾಯಿಗಳಷ್ಟು ಹೆಚ್ಚಳ ಕಂಡಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.