ಪರಿಶೀಲಿಸಿ ಕ್ರಮ: ಸರ್ಕಾರ ಭರವಸೆ

7
ಸಿಮೆಂಟ್ ಕಂಪೆನಿಗೆ `ಸಿಸಿಐ' ದಂಡ ಪ್ರಕರಣ

ಪರಿಶೀಲಿಸಿ ಕ್ರಮ: ಸರ್ಕಾರ ಭರವಸೆ

Published:
Updated:

 


ನವದೆಹಲಿ(ಪಿಟಿಐ): ಉದ್ದೇಶ ಪೂರ್ವಕವಾಗಿ ಉತ್ಪಾದನೆ ತಗ್ಗಿಸಿ ದರ ಏರಿಕೆಗೆ ಕಾರಣವಾಗಿದ್ದ ಆರೋಪದ ಮೇರೆಗೆ 11 ಸಿಮೆಂಟ್ ಕಂಪೆನಿಗಳಿಗೆ  ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಭಾರಿ ದಂಡ ವಿಧಿಸಿರುವ ಪ್ರಕರಣವನ್ನು ಪರಿಶೀಲಿಸುವುದಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

 


ಸಿಮೆಂಟ್ ತಯಾರಕರ ಸಂಘ (ಸಿಎಂಎ) ಇತ್ತೀಚೆಗೆ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ರಾಜ್ಯ ಸಚಿವ ಎಸ್.ಜಗತ್ ರಕ್ಷಕನ್, ದಂಡ ಕ್ರಮದ ವಿಚಾರವಾಗಿ `ಸಿಸಿಐ' ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

 


11 ಸಿಮೆಂಟ್ ಕಂಪೆನಿಗಳು ಮತ್ತು `ಸಿಎಂಎ'ಗೆ ರೂ. 6380 ಕೋಟಿಯಷ್ಟು ಭಾರಿ ದಂಡವನ್ನು `ಸಿಸಿಐ' ವಿಧಿಸಿದೆ. ಈ ಮಧ್ಯೆ, ಆರ್ಥಿಕ ಮಂದಗತಿ ಪ್ರಗತಿಯಿಂದಾಗಿ ಬೇಡಿಕೆ ತಗ್ಗಿದ್ದರಿಂದ ಕಡಿಮೆ ಸಿಮೆಂಟ್ ಉತ್ಪಾದಿಸಲಾಯಿತು ಎಂದು `ಸಿಸಿಐ'ಗೆ `ಸಿಎಂಎ' ಸಮಜಾಯಿಸಿ ನೀಡಿದೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry