ಪರಿಷೆ: ದಿನದಲ್ಲಿ 3000 ಪುಸ್ತಕ ಸಂಗ್ರಹ

7

ಪರಿಷೆ: ದಿನದಲ್ಲಿ 3000 ಪುಸ್ತಕ ಸಂಗ್ರಹ

Published:
Updated:

ಬೆಂಗಳೂರು: ನಗರದಲ್ಲಿ ನಡೆಯ ಲಿರುವ ಆರನೇ ಕನ್ನಡ ಪುಸ್ತಕ ಪರಿಷೆ ಅಂಗವಾಗಿ ಬಸವನಗುಡಿಯ ‘ಕರು ನಾಡ ಗೆಳೆಯರು’ ಆಶ್ರಯದಲ್ಲಿ ಪುಸ್ತಕಗಳ ಸಂಗ್ರಹಣಾ ಅಭಿಯಾನಕ್ಕೆ ನೆಟ್ಟಕಲ್ಲಪ್ಪ ವೃತ್ತದ ಬಳಿ ಭಾನುವಾರ ಚಾಲನೆ ನೀಡಲಾಯಿತು. ಒಂದೇ ದಿನ 3,000ಪುಸ್ತಕ ಸಂಗ್ರಹವಾಗಿದೆ.ಸಂಘಟನೆಯ ಅಧ್ಯಕ್ಷ ರಾ. ಲಕ್ಷ್ಮೀ ನಾರಾಯಣ ಮಾತನಾಡಿ, ‘ಸೃಷ್ಟಿ ವೆಂಚರ್ಸ್ ವತಿಯಿಂದ ನಡೆಯಲಿರುವ ಪರಿಷೆಗೆ 20 ಲಕ್ಷ ಪುಸ್ತಕಗಳ ಅಗತ್ಯ ಇದೆ. ಪುಸ್ತಕಗಳನ್ನು ಪರಿಚಯಿಸಲು, ಉಚಿತವಾಗಿ ಪಡೆಯಲು ಹಾಗೂ ಪುಸ್ತಕಗಳ ಅರಿವಿನ ಪ್ರದರ್ಶನಕ್ಕಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.‘ಪರಿಷೆಗೆ ಸಾವಿರಾರು ಪುಸ್ತಕಗಳನ್ನು ಸಮರ್ಪಿಸುವ ಉದ್ದೇಶ ಇದೆ. ಸಾರ್ವಜನಿಕರು ಮಾಹಿತಿ ನೀಡಿದರೆ ಮನೆಗೆ ಹೋಗಿ ಪುಸ್ತಕ ಸಂಗ್ರಹಿಸ ಲಾಗುವುದು. ತಮ್ಮ ಸಂಗ್ರಹದಲ್ಲಿ ರುವ, ಓದಿದ ಕನ್ನಡ ಅಥವಾ ಯಾವುದೇ ಭಾಷೆಯ ಹಳೆಯ ಹೊಸ ಪುಸ್ತಕಗಳನ್ನು ಸಾರ್ವಜನಿಕರು ನೀಡಬಹುದು’ ಎಂದರು.ಸಂಘಟನೆಯ ಉಪಾಧ್ಯಕ್ಷ ಗಿರೀಶ್‌ ಕೆ.ಎಂ, ಕಾರ್ಯದರ್ಶಿ ಲೋಕೇಶ್ ಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry