ಪರಿಸರವಾದಿ ಸೇತ್ನ ಇನ್ನಿಲ್ಲ

7

ಪರಿಸರವಾದಿ ಸೇತ್ನ ಇನ್ನಿಲ್ಲ

Published:
Updated:

ಚಿಕ್ಕಮಗಳೂರು: ಪರಿಸರವಾದಿ ಹಾಗೂ ಕಾಫಿ ಬೆಳೆಗಾರ ಕೌಸಿ ಆರ್.ಸೇತ್ನ (90) ಭಾನುವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಕರಾಚಿ­ಯಿಂದ ಬಂದು ಮುಂಬೈ ಮತ್ತು ಕೋಲ್ಕತ್ತದಲ್ಲಿ ಕೆಲ ವರ್ಷ ನೆಲಿಸಿದ್ದು, ನಂತರ ಮೋರಸ್ ಎಂಬು­ವವರ ಜತೆಗೆ ಬಿಳಿರಂಗನಬೆಟ್ಟದಲ್ಲಿ ವಾಸಿಸುತ್ತಿದ್ದರು. 1969ರಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಯಲಗುಡಿಗೆಯಲ್ಲಿ ಕಾಫಿ ತೋಟ ಖರೀದಿಸಿ ನೆಲೆ ನಿಂತಿದ್ದರು. ಜತೆಗೆ ಕುದುರೆ ಜಾಕಿಯಾಗಿದ್ದರು.ಕುದುರೆಮುಖ ಗಣಿಗಾರಿಕೆ ವಿರೋಧಿ ಹೋರಾಟ ಸೇರಿದಂತೆ ಪರಿಸರ ಚಳವಳಿಯಲ್ಲಿ ಅವರು ಪಾಲ್ಗೊಂಡಿದ್ದರು.   ಪಕ್ಷಿ ತಜ್ಞ ಸಲೀಂ ಅಲಿ ಹಾಗೂ ದೇಶದ ಹೆಸರಾಂತ ವನ್ಯಜೀವಿ ಕಾರ್ಯಕರ್ತರು ಮತ್ತು ಪರಿಸರವಾದಿಗಳ ಒಡನಾಟ ಹೊಂದಿ­ದ್ದರು. ತೋಟ ಮಾರುವಾಗ  ನೈಸರ್ಗಿಕ ಗಿಡಮರಗಳನ್ನು ಕಡಿಯ­ದಂತೆ ನಿರ್ಬಂಧ ಹಾಕಿ ಪರಿಸರದ ಬಗ್ಗೆ ಕಾಳಜಿಯನ್ನು ತೋರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry