ಪರಿಸರಸ್ನೇಹಿ ಗಣಪ ಜನಜಾಗೃತಿ

7
ಕ್ಯಾಂಪಸ್ ಕಲರವ

ಪರಿಸರಸ್ನೇಹಿ ಗಣಪ ಜನಜಾಗೃತಿ

Published:
Updated:
ಪರಿಸರಸ್ನೇಹಿ ಗಣಪ ಜನಜಾಗೃತಿ

ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸನಸ್ ಸ್ಟಡೀಸ್‌ನ ಇಕೋ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರ ಸಹಯೋಗದೊಂದಿಗೆ ಪರಿಸರಸ್ನೇಹಿ ಗಣಪತಿ ಬಳಕೆ ಕುರಿತು ಜಾಗೃತಿ ಅಭಿಯಾನ ನಡೆಯಿತು. ಕಾಲೇಜಿನ ಇಕೋ ಕ್ಲಬ್ ಗ್ರೀನ್ ಮಿಷನ್‌ನ ಸದಸ್ಯರು ಈ ಸಂದರ್ಭದಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಕೆಂಗೇರಿ ಉಪನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಶಾಲೆ, ಕಾಲೇಜು, ಮನೆ ಹಾಗೂ ಅಂಗಡಿ ಮುಂಗಟ್ಟು ಮುಂತಾದೆಡೆ ಸಂಚರಿಸಿ ಸಾವಿರಕ್ಕೂ ಅಧಿಕ ಜನರನ್ನು ಭೇಟಿ ಮಾಡಿ ಪರಿಸರಸ್ನೇಹಿ ಗಣಪತಿ ಮತ್ತು ರಾಸಾಯನಿಕ ಬಣ್ಣಗಳುಳ್ಳ ಗಣಪತಿಯ ಬಳಕೆಯ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡಲಾಯಿತು.`ಬಣ್ಣದ ಗಣಪ ಬೇಡ' ಎಂಬ ಬೀದಿನಾಟಕ, ಬೀಸು ಕಂಸಾಳೆ ಪ್ರದರ್ಶನವೂ ನಡೆಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಟ್ರೇಶ್, ಎಸ್‌ಇಟಿನ ಪಾರ್ಥಸಾರಥಿ ಹಾಗೂ ಅನಂತರಾಮ್ ಮತ್ತು ಕಾಲೇಜು ಪ್ರಾಂಶುಪಾಲ ಜಯರಾಮ್, ಸಂಚಾಲಕಿಯರಾದ ಚಿತ್ರಾ ಹಾಗೂ ಅವರ ತಂಡದ ವಿದಾರ್ಥಿಗಳು ಕಾರ್ಯಕ್ರಮದ ಉದ್ಘಾಟನೆಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry