ಮಂಗಳವಾರ, ನವೆಂಬರ್ 19, 2019
29 °C

ಪರಿಸರ ಅಭಿವೃದ್ಧಿ ಕಡೆಗಣನೆ: ಬೋರಲಿಂಗಯ್ಯ ವಿಷಾದ

Published:
Updated:

ಮುಂಡರಗಿ: `ಕೃಷಿಯನ್ನೆ ನಂಬಿಕೊಂಡಿ ರುವ ನಮ್ಮ ದೇಶದ ಹಳ್ಳಿಗಳ ಸ್ಥಿತಿ ವಿವಿಧ ಕಾರಣಗಳಿಂದಾಗಿ ಇಂದು ತುಂಬಾ ದಯನೀಯವಾಗಿದೆ. ಸರಕಾರ ಗಳು ಕೃಷಿ ಮತ್ತು ಕೃಷಿಕರನ್ನು ನಾಶ ಮಾಡುವ ಮೂಲಕ ರೈತರನ್ನು ಪರಾ ಧೀನರನ್ನಾಗಿ ಮಾಡುತ್ತಿರುವುದು ದುರ್ದೈವದ ಸಂಗತಿ' ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು.ಸ್ಥಳೀಯ ಕ.ರಾ.ಬೆಲ್ಲದ ಮಹಾ ವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಪಠ್ಯೇತರ ಚಟು ವಟಿಕೆಗಳ ಮುಕ್ತಾಯ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು.`ಕಳೆದ 30ವರ್ಷಗಳಲ್ಲಿ ಶೇಕಡಾ 40ರಷ್ಟಿದ್ದ ಅರಣ್ಯ ಪ್ರದೇಶ ಇಂದು ಕೇವಲ ಶೇಕಡಾ 18ಕ್ಕೆ ಇಳಿದಿದೆ. ಪರಿಸರ ಅಭಿವೃದ್ಧಿಯನ್ನು ನಾವೆಲ್ಲ ಸಂಪೂರ್ಣವಾಗಿ ಕಡೆಗಣಿಸಿದ್ದೆವೆ. ಪರಿಸರ ಅಸಮತೋಲನೆಯಿಂದ ಹವಾ ಮಾನದಲ್ಲಿ ವಿಪರೀತ ಏರು ಪೇರು ಉಂಟಾಗುತ್ತಿದ್ದು, ಎಲ್ಲೆಡೆಗೂ ಬರಗಾಲ ಸಾಮಾನ್ಯವೆನ್ನುವಂತಾಗಿದೆ. ರಾಜಕಾರಣವನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿರುವ ಜನಪ್ರತಿನಿಧಿ ಗಳಿಂದ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ' ಎಂದು ಅವರು ತಿಳಿಸಿದರು.`ಗ್ರಾಮಗಳು ಉಳಿದರೆ ಮಾತ್ರ ನಾಡು, ದೇಶ, ಭಾಷೆ, ಸಂಸ್ಕೃತಿಗಳು ಉಳಿಯುತ್ತವೆ. ಆದ್ದರಿಂದ ಗ್ರಾಮಾಭಿವೃದ್ಧಿ ಮತ್ತು ಪರಿಸರ ಅಭಿವೃದ್ಧಿ ಕುರಿತಂತೆ ಯುವಜನತೆ ತಮ್ಮ ಇತಿಮಿತಿಯೊಳಗೆ ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಆ ಮೂಲಕ ತಮ್ಮನ್ನು ಸಮಾಜ ಸೇವೆಗೆ ಸಮರ್ಪಿಸಿಕೊಳ್ಳಬೇಕು' ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಈಚೆಗೆ ಹಂಪಿ ವಿಶ್ವ ವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಡಾ.ಅನ್ನದಾ ನೀಶ್ವರ ಸ್ವಾಮೀಜಿ ಅವರಿಗೆ ಕ.ರಾ. ಬೆಲ್ಲದ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳ ಸಿಬ್ಬಂದಿ ಗುರುವಂದನೆ ಸಲ್ಲಿಸಿದರು.ಕಾಲೇಜು ಕಮಿಟಿ ಕಾರ್ಯಾಧ್ಯಕ್ಷ ಆರ್.ಬಿ.ಡಂಬಳಮಠ ಅಧ್ಯಕ್ಷತೆ ವಹಿಸಿದ್ದರು. ಉಪಕಾರ್ಯಾಧ್ಯಕ್ಷ ಕಾಂತರಾಜ ಹಿರೇಮಠ, ಪ್ರಾಚಾರ್ಯ ಎಸ್.ಬಿ.ಕೆ.ಗೌಡರ, ಹಿರಿಯ ಉಪನ್ಯಾಸಕ ಎಂ.ಜಿ.ಗಚ್ಚಣ್ಣವರ, ವಿದ್ಯಾರ್ಥಿ ಕಾರ್ಯದರ್ಶಿ ವಿ.ಟಿ.ಬಡಿ ಗೇರ ವೇದಿಕೆಯ ಮೇಲೆ ಹಾಜರಿದ್ದರು.

ಪ್ರಾಚಾರ್ಯ ಎಸ್.ಬಿ.ಕೆ.ಗೌಡರ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆರ್.ಎಸ್.ಪೊಲೀಸ್‌ಪಾಟೀಲ ನಿರೂಪಿಸಿದರು.

ಪ್ರತಿಕ್ರಿಯಿಸಿ (+)