ಶುಕ್ರವಾರ, ಏಪ್ರಿಲ್ 23, 2021
22 °C

ಪರಿಸರ ಉಳಿಸುವ ಆಂದೋಲನವಾಗಲಿ: ಶೈಲಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ : ಮನುಷ್ಯ ಸ್ವಾರ್ಥಕ್ಕಾಗಿ ಜೀವ ವೈವಿಧ್ಯಗಳನ್ನು ನಾಶಪಡಿಸುತ್ತಿರುವುದು ಪರಿಸರಕ್ಕೆ ಮಾರಕವಾಗುತ್ತಿದೆ ಎಂದು ಜಿ.ಪಂ ಸದಸ್ಯೆ ವಸಂತಪ್ರಕಾಶ್ ತಿಳಿಸಿದರು.

ತಾಲ್ಲೂಕಿನ ದೊಡ್ಡಬ್ಯಾಡಹರಳ್ಳಿ ಗ್ರಾಮದಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಜನೋದಯ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಜೀವ ವೈವಿಧ್ಯ ಸಂರಕ್ಷಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮನುಷ್ಯ  ಸ್ವಾರ್ಥಕ್ಕಾಗಿ ಪ್ರಕೃತಿ ದತ್ತವಾದ ಮರ, ಗಿಡ, ಪ್ರಾಣಿ, ಪಕ್ಷಿ ಸಂಕುಲ, ಭೌತಿಕ ಸಂಪನ್ಮೂಲಗಳನ್ನು ನಾಶಪಡಿ ಸುತ್ತಿದ್ದಾನೆ.   ದುರಾಸೆ ಬಿಟ್ಟು ಜೀವ ವೈವಿಧ್ಯ ಜೀವಿಗಳು, ಸಸ್ಯಗಳು, ಭೌತಿಕ ಸಂಪನ್ಮೂಲಗಳನ್ನು ಸಂರಕ್ಷಿಸದಿದ್ದಲ್ಲಿ  ಯಾವ ಜೀವ ಸಂಕುಲಗಳು ಉಳಿಯದೆ ಮುಂದಿನ ಪೀಳಿಗೆ ಕ್ಷಮಿಸಲಾರದು ಎಂದರು.

 

ತಾ.ಪಂ ಸದಸ್ಯೆ ಶೈಲಜಾ ಗೋವಿದಂದರಾಜು ಮಾತನಾಡಿ, ಪರಿಸರ ಉಳಿಸುವ ಒಂದು ದೊಡ್ಡ ಜಾಗೃತಿ ಆಂದೋಲನ ನಡೆಯಬೇಕಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯಗಳ ವಿರುದ್ಧದ ಸಂಘಟಿತ ಹೋರಾಟ ಮಾಡಬೇಕಾ ಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ವ್ಯಾಪಕ ಪ್ರಚಾರ ಆಂದೋಲನ ನಡೆಸಬೇಕಾ ಗಿದೆ. ಜನತೆ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ರೋಗ ರುಜಿನಗಳಿಂದ ದೂರವಿರ ಬೇಕೆಂದು ಸಲಹೆ ನೀಡಿದರು.

 

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಡ್ಯದ ಸಾಮಾಜಿಕ ವಿಜ್ಞಾನಿ ಡಾ. ಬಿ.ಎಂ. ನಾಗಪ್ಪ ಜೀವ ವೈವಿಧ್ಯ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು.

ಗ್ರಾ. ಪಂ. ಅಧ್ಯಕ್ಷ ಟಿ.ಶ್ರೀನಿವಾಸ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭಾರತಿ ಶಿವಣ್ಣ ಗ್ರಾ.ಪಂ. ಸದಸ್ಯರಾದ ಟಿ.ಡಿ.ಧರ್ಮ, ಮಾಜಿ ಅಧ್ಯಕ್ಷ  ಶಿವಣ್ಣ, ವಿಎಸ್‌ಎಸ್‌ಎನ್ ಅಧ್ಯಕ್ಷ ಅಣ್ಣೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡೈರಿ ನಾಗೇಂದ್ರ, ಜನೋದಯ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಕೆ. ಗೋಪಾಲ್, ಟಿ.ಎಂ. ಸೋಮಶೇಖರ್ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.