ಬುಧವಾರ, ಜೂನ್ 16, 2021
22 °C

ಪರಿಸರ ಜಾಗೃತಿ ಆಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನ ಕಚವಿ ಗ್ರಾಮದ ಪದ್ಮಶ್ರೀ ಸರದಾರ ವೀರನಗೌಡಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ್ಯಾದ್ರಿ ಇಕೋ ಕ್ಲಬ್ ವತಿಯಿಂದ ಪರಿಸರ ಜಾಗೃತಿ ಆಂದೋಲನ ನಡೆಸಲಾಯಿತು.  ಪರಿಸರ ಜಾಗತಿ ಆಂದೋಲನಕ್ಕೆ ಮುಖ್ಯ ಶಿಕ್ಷಕ ಆರ್. ಆರ್. ಕೀವಡೇಕರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ನಾಗರಾಜ ಧಾರೇಶ್ವರ, ಅಮೂಲ್ಯ ಸಂಪನ್ಮೂಲವಾದ ಕಾಡನ್ನು ರಕ್ಷಿಸುವಲ್ಲಿ ನಾವೆಲ್ಲರೂ ಕಾರ್ಯಪ್ರವತ್ತರಾಗಬೇಕು ಎಂದರು.ಇಂದಿ ನಿಂದಲೇ ಪರಿಸರ ರಕ್ಷಣ ಕಾರ್ಯದಲ್ಲಿ ತೊಡಗಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕು. ಪರಿಸರ ರಕ್ಷಣೆ ಎಲ್ಲರ ಧ್ಯೇಯವಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಹಸಿರೇ ಉಸಿರು, ಮನೆಗೊಂದು ಮರ ಊರಿಗೊಂದು ವನ, ಕಾಡಿದ್ದರೆ ನಾಡು, ಮರಗಳನ್ನು ಉಳಿಸೋಣ ಜೀವ ವೈವಿಧ್ಯತೆ ಕಾಪಾಡೋಣ ಎನ್ನುವ ಅರ್ಥಪೂರ್ಣವಾದ ಘೋಷಣೆಗಳನ್ನು ಕೂಗುವ ಮೂಲಕ ಜಾಥಾ ನಡೆಸಿ ಗ್ರಾಮಸ್ಥರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದರು.ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಬೇಕು ಎಂದು ವಿದ್ಯಾರ್ಥಿಗಳು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.

ಪರಿಸರ ರಕ್ಷಣೆಗೆ ಸಂಬಂಧಿಸಿದ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಮಾಲತೇಶ ನಾಡಿಗೇರ, ಬಿ.ವಿ. ಕಲ್ಲಮ್ಮನವರ, ಎಸ್.ಜೆ.ಚಿತ್ರಗಾರ, ವಿ.ವಿ.ಚಕ್ರಸಾಲಿ, ಶಿವಕುಮಾರ ಎಚ್, ಶಾಂತಪ್ಪ , ನೇತ್ರಾವತಿ ಪವಾರ ಮೊದಲಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.