ಪರಿಸರ ಪ್ರಜ್ಞೆಯ ಎಳೆಗಳು...

7

ಪರಿಸರ ಪ್ರಜ್ಞೆಯ ಎಳೆಗಳು...

Published:
Updated:

`ಅಪ್ಪಿಕೋ....' ಎಂಬ ಮೂರು ದಶಕಗಳ ರೂಪಕ (ಸೆ. 5) ಲೇಖನ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಓದಿದ ನಂತರ ನಾನು ಪರಿಸರ ಚಳವಳಿಯೊಂದರಲ್ಲಿ ನನ್ನನ್ನೇಕೆ ತೊಡಗಿಸಿಕೊಳ್ಳಲಿಲ್ಲ ಎಂದು ಹಳಹಳಿಸಿದೆ.

ಲೇಖನ ಓದುತ್ತಾ ಹೋದಂತೆ ಪರಿಸರ ಚಳವಳಿಗಳ ಸಾಧ್ಯಾಸಾಧ್ಯತೆಗಳು ಮತ್ತು ಲೇಖಕರ ಸೂಕ್ಷ್ಮ ಸಂವೇದನೆಗಳು ಅರಿವಿಗೆ ಬರುತ್ತವೆ- ನಿಧಾನವಾಗಿ ಮನಸ್ಸಿಟ್ಟು ಓದಿದಾಗ. `ನಂಬಿಕೆ ಇಲ್ಲದ ಬಾಳು ಬಾಳೇ ಅಲ್ಲ. ಆಶಾವಾದ ತೊರೆದು ಬಾಳುವುದು ನಮ್ಮ ದೇಶಕ್ಕೆ ಸಲ್ಲದು' ಎಂಬ ಕೊನೆಯ ಎರಡು ವಾಕ್ಯಗಳು ಪರಿಸರ ಪ್ರಜ್ಞೆಯ ಎರಡು ಎಳೆಗಳಾಗಿ ನನ್ನ ಮನಸನ್ನು ತಟ್ಟಿದವು. `ಅಪ್ಪಿಕೋ' ಚಳವಳಿ ಒಂದು ರೂಪಕವಾಗಿರುವುದಕ್ಕೆ ಸಮಾಧಾನವಿದೆ, ವಿಷಾದವೂ ಇದೆ. ಲೇಖಕ ಕೆ.ಪಿ. ಸುರೇಶ ಅವರಿಗೆ ಅಭಿನಂದನೆಗಳು.

-ಮಾಣಿಕರಾವ ಪಸಾರ, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry