ಮಂಗಳವಾರ, ಮೇ 11, 2021
22 °C

ಪರಿಸರ ಪ್ರಿಯರ ಜಾಗೃತಿ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಸರ ಪ್ರಿಯರ ಜಾಗೃತಿ ಓಟ

ವಿಶ್ವ ಪರಿಸರ ದಿನದ ಅಂಗವಾಗಿ ದೊಮ್ಮಲೂರಿನ ಮದರ್ ಅರ್ಥ್ ಸಂಸ್ಥೆ ಆಯೋಜಿಸಿದ್ದ `ರನ್ ಫಾರ್ ಟ್ರೀಸ್' ಜಾಗೃತಿ ಓಟದಲ್ಲಿ ಪರಿಸರಪ್ರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.ಭಾನುವಾರ (ಜೂನ್ 9) ಬೆಳಿಗ್ಗೆ ನಡೆದ ಈ ಓಟದ ಪ್ರಮುಖ ಉದ್ದೇಶ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವುದಾಗಿತ್ತು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ನಿರ್ದೇಶಕ ಪ್ರೊ.ಶಿವಲಿಂಗಂ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ರಾಖೇಶ್ ಗೋದ್ವಾನಿ ಓಟದಲ್ಲಿ ಪಾಲ್ಗೊಂಡಿದ್ದ ಜನಾಕರ್ಷಕ ವ್ಯಕ್ತಿಗಳು.ಬೆಳಿಗ್ಗೆ 6.30ಕ್ಕೆ ಪ್ರಾರಂಭಗೊಂಡ ಜಾಗೃತಿ ಓಟದಲ್ಲಿ 300ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಓಟದಲ್ಲಿ ಭಾಗವಹಿಸಿದ್ದ ಎಲ್ಲರೂ ಅರ್ಥ್ ಟೀಶರ್ಟ್ ಧರಿಸಿದ್ದು ವಿಶೇಷ. ಓಟಕ್ಕೂ ಮುನ್ನ ಓಟಗಾರರನ್ನು ಹುರಿದುಂಬಿಸಿದ್ದು ಜಾನಪದ ನೃತ್ಯ, ಡೊಳ್ಳು ಕುಣಿತ ಕಲಾವಿದರ ಆಕರ್ಷಕ ಪ್ರದರ್ಶನ. ಓಟದಲ್ಲಿ ಪಾಲ್ಗೊಂಡಿದ್ದವರನ್ನು ಹುರಿದುಂಬಿಸುವುದರ ಜತೆಗೆ ನಗರಿಗರಿಗೆ ಹಳ್ಳಿ ಸೊಗಡಿನ ಜನಪ್ರಿಯ ಕಲೆಗಳನ್ನು ಪರಿಚಯಿಸುವ ಉದ್ದೇಶವನ್ನು ಸಂಸ್ಥೆ ಗಮನದಲ್ಲಿರಿಸಿಕೊಂಡಿತ್ತು. ದಿನೇದಿನೇ ಹದಗೆಡುತ್ತಿರುವ ಪರಿಸರದ ಬಗ್ಗೆ ಮಕ್ಕಳು, ವಯಸ್ಕರು ಹಾಗೂ ವೃದ್ಧರಲ್ಲಿ ಜಾಗೃತಿ ಮೂಡಿಸಲಾಯಿತು. ಓಟದಲ್ಲಿ ಪಾಲ್ಗೊಂಡವರೆಲ್ಲಾ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಹಸಿರೀಕರಣಕ್ಕೆ ಕೈ ಜೋಡಿಸುವುದಾಗಿ ಪ್ರತಿಜ್ಞೆ ಮಾಡಿದರು.

ಪುರುಷರು, ಮಹಿಳೆಯರು ಹಾಗೂ ಮಕ್ಕಳ ವಿಭಾಗದ ಓಟದಲ್ಲಿ ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ಕ್ರಮವಾಗಿ ರೂ10 ಸಾವಿರ,ರೂ 5 ಸಾವಿರ ಮತ್ತು ರೂ 3 ಸಾವಿರ ಬಹುಮಾನವನ್ನು ನೀಡಲಾಯಿತು.`ಓಟದಲ್ಲಿ ಪಾಲ್ಗೊಂಡವರ ಉತ್ಸಾಹ ಕಂಡು ನನಗೆ ತುಂಬ ಖುಷಿಯಾಗಿದೆ. ಅವರೆಲ್ಲರೂ ಪರಿಸರದ ಬಗ್ಗೆ ತೋರಿಸುತ್ತಿರುವ ಕಾಳಜಿ ನನಗೆ ಮತ್ತಷ್ಟು ಸ್ಫೂರ್ತಿ ತುಂಬಿದೆ. ಇದಕ್ಕಾಗಿ ಎಲ್ಲ ಪರಿಸರ ಪ್ರೇಮಿಗಳನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ' ಎಂದು ತಮ್ಮ ಖುಷಿ ಹಂಚಿಕೊಂಡರು ಮದರ್ ಅರ್ಥ್‌ನ ಸಂಸ್ಥಾಪಕರಾದ ನೀಲಂ ಚಿಬ್ಬರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.