ಗುರುವಾರ , ಮೇ 13, 2021
17 °C

ಪರಿಸರ ರಕ್ಷಣೆಗೆ ಇಚ್ಛಾಶಕ್ತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ: ಮನುಷ್ಯ ನಿಸರ್ಗವನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ಪರಿಸರವನ್ನು ವಿನಾಶದ ಅಂಚಿಗೆ ಕೊಂಡೊಯ್ದಿದ್ದಾನೆ ಎಂದು ಪರಿಸರವಾದಿ ಉಲ್ಲಾಸ್ ಕಾರಂತ್ ಬೇಸರ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ರೋಟರಿ ಕ್ಲಬ್ ಭಾನುವಾರ ಆಯೋಜಿಸಿದ್ದ ಭೂಸಂರಕ್ಷಣೆ ಕುರಿತ ಜಿಲ್ಲಾ ಸಮ್ಮೇಳನ `ಭೂರಮೆ~ಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಭೂ ತಾಪಮಾನ ಐದು ಡಿಗ್ರಿಗಳಷ್ಟು ಏರಿಕೆಯಾದಲ್ಲಿ ಮನುಕುಲದ ಮೆಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.ಸಮ್ಮೇಳನ ಉದ್ಘಾಟಿಸಿದ ರೋಟರಿ ರಾಜ್ಯಪಾಲ ಎಚ್.ಎಲ್.ರವಿ ಮಾತನಾಡಿ, ಮನುಷ್ಯ ಸರಳ ಜೀವನ ವಿರೋಧಿಸುತ್ತಿರುವುದು ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದರು.ಜಾಗತಿಕ ಹವಮಾನ ಬದಲಾವಣೆ ಕುರಿತು ಪ್ರೊ.ಕುಮಾರಸ್ವಾಮಿ, ಪಶ್ಚಿಮಘಟ್ಟ ದಕ್ಷಿಣ ಭಾರತದ ಬೆನ್ನೆಲುಬು ಕುರಿತು ಗಜೇಂದ್ರ ಗೊರಸುಕುಡಿಗೆ, ಜಲ ಕ್ಷಾಮದ ಕುರಿತು ಡಾ.ನಾರಾಯಣ ಶೆಣೈ, ಪರಿಸರ ಸಂರಕ್ಷಣೆಯ ಬಿಕ್ಕಟ್ಟುಗಳು ಕುರಿತು ಕಲ್ಕುಳಿ ವಿಠ್ಠಲ ಹೆಗ್ಡೆ ವಿಷಯ ಮಂಡಿಸಿದರು.ರೋಟರಿ ಕ್ಲಬ್ ಅಧ್ಯಕ್ಷ ನಾಗೇಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಉಪ ಗವರ್ನರ್ ಆಂಶುಮಂತ್, ಎಚ್.ಎಸ್.ನಟೇಶ್, ಕೆ.ಪುಟ್ಟಯ್ಯ, ಬಿ.ಜಿ.ಕಾಡಪ್ಪಗೌಡ ಅವರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.