ಸೋಮವಾರ, ಮೇ 17, 2021
21 °C

ಪರಿಸರ ರಕ್ಷಣೆಗೆ ಕ್ಯಾಲೆಂಡರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಸರ ರಕ್ಷಣೆಗೆ ಎಷ್ಟು ಮಾಡಿದರೂ ಕಡಿಮೆಯೇ. ಇದಕ್ಕೆ ಇಂಬು ನೀಡುವಂತೆ ಪರಿಸರ ವ್ಯಂಗ್ಯಚಿತ್ರಗಳನ್ನೊಳಗೊಂಡ ಅತಿ ದೊಡ್ಡ ಕ್ಯಾಲೆಂಡರ್ ಅನ್ನು ನಗರದ ಖ್ಯಾತ ವ್ಯಂಗ್ಯಚಿತ್ರಕಾರ ಬಿ.ವಿ. ಪಾಂಡುರಂಗ ರಾವ್ ಅವರು ಹೊರತಂದಿದ್ದಾರೆ.ಪರಿಸರದ ಬಗೆಗಿನ ಮಾನವನ ನಿರ್ಲಕ್ಷ್ಯ, ಪ್ರಕೃತಿಯೆಡೆಗಿನ ಪ್ರೀತಿ ಎಲ್ಲವೂ ಈ ವ್ಯಂಗ್ಯ ಚಿತ್ರಗಳಲ್ಲಿ ಭಿನ್ನರೂಪ ತಳೆದಿವೆ. ವಿದ್ಯಾರಣ್ಯಪುರ ಶಾಖೆಯ ಡಿಗ್ನಿಟಿ ಫೌಂಡೇಶನ್ ಚಾವಡಿ ಆವರಣದಲ್ಲಿ ಈ ಚಿತ್ರಗಳನ್ನು ಅನಾವರಣಗೊಳಿಸಲಾಯಿತು.4 ಅಡಿ 2 ಇಂಚು ಎತ್ತರ, 2 ಅಡಿ 7 ಇಂಚು ಅಗಲದ ಡೆಸ್ಕ್ ಕ್ಯಾಲೆಂಡರ್ ಆಕಾರದ ಸ್ಟಾಂಡ್ ಮೇಲೆ 13 ಪ್ರತಿ ದೊಡ್ಡ ಹಾಳೆಗಳಲ್ಲಿ ಪರಿಸರದ ಕುರಿತು ರಚಿಸಿದ ವ್ಯಂಗ್ಯಚಿತ್ರದೊಂದಿಗೆ ಆಯಾ ತಿಂಗಳು, ತಾರೀಖುಗಳನ್ನು ಕೈಯಲ್ಲೇ ರಚಿಸಲಾಗಿದೆ.ಪರಿಸರ ಕಾಳಜಿ ಮತ್ತು ಪರಿಸರದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅತಿ ದೊಡ್ಡ ಕ್ಯಾಲೆಂಡರ್‌ಅನ್ನು ರಚಿಸಲಾಗಿದೆಯಂತೆ. ಪಾಂಡುರಂಗರಾವ್ ಅವರ ಪರಿಸರಕ್ಕೆ ಸಂಬಂಧಿಸಿದ ಸುಮಾರು 40 ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನೂ ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.