ಪರಿಸರ ರಕ್ಷಣೆಗೆ ಜೈವಿಕ ಇಂಧನ ಪೂರಕ

ಗುರುವಾರ , ಜೂಲೈ 18, 2019
24 °C

ಪರಿಸರ ರಕ್ಷಣೆಗೆ ಜೈವಿಕ ಇಂಧನ ಪೂರಕ

Published:
Updated:

ಹಾಸನ: `ಜೈವಿಕ ಇಂಧನ ಕಾರ್ಯಕ್ರಮ ದೇಶದ ಆರ್ಥಿಕ ಪ್ರಗತಿ, ಕೃಷಿ ಮತ್ತು ಪರಿಸರ ಸಂರಕ್ಷಣೆಗೆ ಪೂರಕವಾದದ್ದು, ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸಂಶೋಧನೆಗಳಾಗಬೇಕು~ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಟಿ.ಅಂಜನ್‌ಕುಮಾರ್ ನುಡಿದರು.ಜಿಲ್ಲಾ ಪಂಚಾಯಿತಿ ಹಾಗೂ ಮಡೆ ನೂರು ಜೈವಿಕ ಇಂಧನ ಉದ್ಯಾನ ಸಹಯೋಗದಲ್ಲಿ ಮಲ್ಲಿಗೆವಾಳು ಗ್ರಾಮ ದಲ್ಲಿ ಈಚೆಗೆ ಆಯೋಜಿಸಿದ್ದ ಹಸಿರು ಹೊನ್ನು ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.ಜೈವಿಕ ಇಂಧನ ಉದ್ಯಾನದ ಯೋಜನಾ ಸಂಯೋಜಕ ಡಾ.ಬಾಲಕೃಷ್ಣಗೌಡ ಮಾತನಾಡಿ, `ಜೈವಿಕ ಇಂಧನ ಸಸ್ಯಗಳು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ~ ಎಂದರು.ಜಿಲ್ಲಾ ಪಂಚಾಯಿತಿ ಸಿಇಓ ಗ್ರಾಮದ ಮಲ್ಲೇಶ್ವರ ಎಣ್ಣೆಬೀಜ ಹಾಗೂ ಇತರ ಕೃಷಿ ಉತ್ಪನ್ನಗಳ ಉತ್ಪಾದಕರ ಸಂಘಕ್ಕೆ ಒಂದು ಎಚ್.ಪಿ. ಸಾಮರ್ಥ್ಯದ ಎಣ್ಣೆ ತೆಗೆಯುವ ಯಂತ್ರವನ್ನು ನೀಡಿದರುಜಿಲ್ಲಾಪಂಚಾಯಿತಿ ಅಭಿಯಂತರ ದತ್ತಾತ್ರೇಯ, ಮೂಕಾಂಬಿಕಾ ಬಯೋಫ್ಯೂಲ್ ಟೆಕ್ನಾಲಜಿ ನಿರ್ದೇಶಕ ರವಿಕುಮಾರ್, ಬೈಫ್ ಸಂಸ್ಥೆಯ ಗಿರೀಶ್, ಜೈವಿಕ ಉದ್ಯಾನದ ಜೀವನ್ ಕುಮಾರ್ ಹಾಗು ತಿಮ್ಮೇಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry