ಮಂಗಳವಾರ, ಮೇ 11, 2021
20 °C

`ಪರಿಸರ ರಕ್ಷಣೆಗೆ ಪಣ ತೊಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪರಿಸರವನ್ನು ನಾಶ ಮಾಡದೆ, ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸಲು ಪಣತೊಡಬೇಕು' ಎಂದು ರಾಜ್ಯಸಭಾ ಸದಸ್ಯ ರಾಮಾಜೋಯಿಸ್ ಹೇಳಿದರು.`ಐ ಅಂಡ್ ಯು' ಪ್ರತಿಷ್ಠಾನ ಹಾಗೂ ಬಿಬಿಎಂಪಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ರಾಜಾಜಿನಗರ 3 ನೇ ಬ್ಲಾಕ್‌ನಲ್ಲಿ ನಡೆದ `ಬೇವಿನ ಸಸಿ ನೆಡುವ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಗಿಡ ನೆಡುವುದರಿಂದ ನಮ್ಮ ಕರ್ತವ್ಯ ಪೂರ್ಣವಾಗುವುದಿಲ್ಲ. ನೆಟ್ಟ ಗಿಡವನ್ನು ಸರಿಯಾಗಿ ಪೋಷಿಸಿ, ಬೆಳೆಸಿದರೆ ಮಾತ್ರ ನಮ್ಮ ಕರ್ತವ್ಯ ಪೂರ್ಣವಾಗುತ್ತದೆ. ಈ ಕರ್ತವ್ಯವನ್ನು ಪ್ರತಿಯೊಬ್ಬರೂ ನಿರ್ವಹಿಸಬೇಕು' ಎಂದು ಕಿವಿಮಾತು ಹೇಳಿದರು.`ಐ ಅಂಡ್ ಯು' ಪ್ರತಿಷ್ಠಾನದ ಸಂಚಾಲಕಿ ವೀಣಾ ಗುಪ್ತಾ ಮಾತನಾಡಿ, `ಬೇವಿನ ಎಲೆ, ಹಣ್ಣುಗಳ್ಲ್ಲಲದೆ, ಕಾಂಡದಲ್ಲಿಯೂ ಔಷಧೀಯ ಗುಣವಿದೆ. ಬೇವಿನ ಸಸಿಗಳ ಔಷಧೀಯ ಅಂಶ ನಮ್ಮ ಜನರಿಗೆ ತಿಳಿಯಲಿ ಮತ್ತು ಪುರಾತನ ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ನೀಡುವುದು ಯೋಜನೆಯ ಮುಖ್ಯ ಉದ್ದೇಶ. ಈಗಾಗಲೇ ನಗರದ ಪದ್ಮನಾಭನಗರ, ಯಲಹಂಕದಲ್ಲಿ ಬೇವಿನ ಗಿಡ ನೆಡಲಾಗಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.