ಪರಿಸರ ರಕ್ಷಣೆಗೆ ಶ್ರೀಗಳ ನೇತೃತ್ವದ ಪ್ರವಾಸ

7

ಪರಿಸರ ರಕ್ಷಣೆಗೆ ಶ್ರೀಗಳ ನೇತೃತ್ವದ ಪ್ರವಾಸ

Published:
Updated:

ಕೂಡಲಸಂಗಮ: ಸಾಣೆಹಳ್ಳಿ ತರಳಬಾಳುಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,  ಸಾಹಿತಿಗಳು ಹಾಗೂ ಪರಿಸರ ತಜ್ಞರ ತಂಡ ಕೂಡಲಸಂಗಮಕ್ಕೆ ಬಂದು ಭಾನುವಾರ ಕೂಡಲ ಸಂಗಮದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.  ಸಂಗಮೇಶ್ವರ ದೇವಾಲಯ, ಬಸವೇಶ್ವರ ಐಕ್ಯ ಮಂಟಪ, ಸಭಾಭವನ, ಬಸವ ಆಂತರರಾಷ್ಟ್ರೀಯ ಕೇಂದ್ರ, ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ದಾಸೋಹ ಭವನ, ಅಂತರರಾಷ್ಟ್ರೀಯ ಗ್ರಂಥಾಲಯ ಮುಂತಾದ ಕಡೆಗೆ ತೆರಳಿದರು. ಮೂರು ಕಿ.ಮೀ ದೋಣಿ ಸಂಚಾರ ಮಾಡಿ ತಂಡಗಡಗಿಯಲ್ಲಿರುವ ಬಸವಣ್ಣನ ಪತ್ನಿ ನೀಲಾಂಬಿ ಕೆಯ ಗದ್ದುಗೆಯನ್ನು ವೀಕ್ಷಿಸಿದರು.    ಕೂಡಲಸಂಗಮ ಸ್ವಲ್ಪ ಮಟ್ಟಿಗೆ ಬೆಳೆದಿದೆ ಇನ್ನೂ ಬೆಳೆಯಬೇಕು, ಈ ಕ್ಷೇತ್ರದಲ್ಲಿ ಹಲವಾರು ಮೂಲಸೌಲಭ್ಯಗಳ ಕೊರತೆ ಇದೆ.  ಶೈಕ್ಷಣಿಕವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.ಪರಿಸರ ಸಂರಕ್ಷಣೆ ಪ್ರವಾಸದ ಸಂಚಾಲಕ ಶಿವನಕೇರಿ ಬಸಲಿಂಗಪ್ಪ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ನಮ್ಮ ಸುತ್ತಮುತ್ತಲಿರುವ ಗುಡ್ಡ ಬೆಟ್ಟವೇ ನಿಜವಾದ ದೇವರು. ಇವುಗಳನ್ನು ಕೆಲವು ರಾಜಕಾರಣಿಗಳು ವ್ಯಾಪಾರಕ್ಕೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ಪರಿಸರ ನಾಶವಾಗುತ್ತದೆ. ಹೀಗಾಗಿ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡುವ ಉದ್ದೇಶ ದಿಂದ ಸ್ವಾಮೀಜಿಗಳ ನೇತೃತ್ವದಲ್ಲಿ ದಾವಣ ಗೆರೆಯಿಂದ ಪರಸರ ಸಂರಕ್ಷಣಾ  ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.ಕಪ್ಪತಗುಡ್ಡ, ಗದಗ, ಕೂಡಲಸಂಗಮ ಹಾಗೂ ಆಲಮಟ್ಟಿಯನ್ನು ನೋಡಿ ದಾವಣಗೆರೆಗೆ ಮರಳ ಲಾಗುವುದು. ಈ ಪ್ರವಾಸದಲ್ಲಿ ಹಲವಾರು ಸಾಹಿತಿ ಗಳು ಪರಿಸರ ಸಂರಕ್ಷಣೆ ಮಾಡುವ ಕುರಿತು ಚಿಂತನ-ಮಂಥನ ಮಾಡುವರು ಎಂದು ಅವರು ಹೇಳಿದರು.ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದರು.

ಸಾಹಿತಿಗಳಾದ ಬಿ.ವಿ.ವೀರಭದ್ರಪ್ಪ, ಎಂ.ಜಿ. ಈಶ್ವರ, ಶಿವಮೂರ್ತಿ, ಎಚ್.ಎನ್,ನಾಗರಾಜ, ಶರಣು ಪಾಟೀಲ, ಎಸ್.ಬಿ.ಗೌಡರ, ಬಿ.ಕೆ.ಗೌಡರ ಮುಂತಾದವರು ಇದ್ದರು. ಕೂಡಲಸಂಗಮ ಲಿಂಗಾ ಯಿತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಗ್ರಾಮಸ್ಥರು ಸಾಣೇಹಳ್ಳಿ ಶ್ರೀಗಳನ್ನು ಸನ್ಮಾನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry