ಪರಿಸರ ರಕ್ಷಣೆಯಿಂದ ಪ್ರಕೃತಿ ಸಮತೋಲನ

7

ಪರಿಸರ ರಕ್ಷಣೆಯಿಂದ ಪ್ರಕೃತಿ ಸಮತೋಲನ

Published:
Updated:

ಸಿರುಗುಪ್ಪ: `ವಚನ ಸಂದೇಶಗಳನ್ನು ಪಾಲಿಸುವುದು, ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳುವುದು ಪ್ರಸ್ತುತ ದಿನದಲ್ಲಿ ಪ್ರತಿಯೊಬ್ಬರ ಕರ್ತವ್ಯವಾಗಿದೆ~ಎಂದು ಮಲ್ಲೂರುಹಟ್ಟಿಯ ಓಂ ವೃಕ್ಷವೃದ್ಧಿ ಯೋಗಾಶ್ರಮದ ತಿಪ್ಪೇರುದ್ರ ಸ್ವಾಮೀಜಿ ಹೇಳಿದರು.ಪಟ್ಟಣಕ್ಕೆ ಶನಿವಾರ ಆಗಮಿಸಿದ ವಚನ ಸಂದೇಶ ಹಾಗೂ ಹಸಿರು ಜಾಗೃತಿ ಸಮಿತಿಯ ಪಾದಯಾತ್ರೆ ನಡೆಸಿ ಸಂದೇಶ ನೀಡಿದರು.ಶಿವಶರಣ ಹರಳಯ್ಯನ ತಪೋಭೂಮಿಯಾದ ಕೊಳ್ಳೇಗಾಲದ ಹರಳೆ ಗ್ರಾಮದಿಂದ ಬಸವಕಲ್ಯಾಣದವರೆಗೆ ಮತ್ತು ಅಲ್ಲಿಂದ ಯಡೆಯೂರಿಗೆ ಸುಮಾರು 1800 ಕಿ.ಮೀ.ವರೆಗೆ ಪಾದಯಾತ್ರೆ ನಡೆಸಿ ಧರ್ಮ ಪ್ರಚಾರ, ಪರಿಸರ ಜಾಗೃತಿ ಮೂಡಿಸುವುದೇ ಈ ಪಾದಯಾತ್ರೆಯ ಉದ್ದೇಶವಾಗಿದೆ ಎಂದರು.ಮೈಸೂರಿನ ಬಸವಲಿಂಗ ಮೂರ್ತಿ ಶರಣರು, ಪೂರ್ಣಾನಂದ ಸ್ವಾಮೀಜಿ, ಬಸವಭೂಷಣ ಸ್ವಾಮೀಜಿ ಮತ್ತು ಬಸವಬಳಗದ ಡಾ. ಎನ್.ಎಂ. ಶಿವಪ್ರಕಾಶ, ಆರ್.ಪಂಪನಗೌಡ, ಎನ್.ಜಿ. ಲಿಂಗಣ್ಣ, ಕೆ.ನಾಗನಗೌಡ, ಶಿವಕುಮಾರ್ ಬಳಿಗಾರ್, ಹಳೇಕೋಟೆ ನಾಗನಗೌಡ, ಎಂ.ಆರ್. ವಿರೂಪಾಕ್ಷಗೌಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry