ಪರಿಸರ ರಕ್ಷಣೆ, ಇಂಧನ ಉಳಿತಾಯ ಅರಿವು ಅಗತ್ಯ

7

ಪರಿಸರ ರಕ್ಷಣೆ, ಇಂಧನ ಉಳಿತಾಯ ಅರಿವು ಅಗತ್ಯ

Published:
Updated:

ಹಿರೀಸಾವೆ: `ಸೈಕಲ್ ಬಳಸಿ ಪರಿಸರ-ಇಂಧನ ಉಳಿಸಿ~ ಫಲಕವನ್ನು ಸೈಕಲ್‌ಗೆ ನೇತು ಹಾಕಿಕೊಂಡು ಸೈಕಲ್ ಜಾಥಾ ಮಾಡುತ್ತಿರುವ 67ರ ಹರೆಯದ ವ್ಯಕ್ತಿಯೊಬ್ಬರು ಶನಿವಾರ ಹಿರೀಸಾವೆಯಲ್ಲಿ ಕಾಣಿಸಿಕೊಂಡರು.ಅರಸಿಕೆರೆ ತಾಲ್ಲೂಕಿನ ಮಾಲೇಕಲ್ ತಿರುಪತಿಯ ಗ್ರಾಮದ ಉಮಾಪತಿ ಮೊದಲಿಯಾರ್ ಅವರು, ಸೆ.24ರಿಂದ ಅರಸಿಕೆರೆಯಿಂದ ಉಡುಪಿವರೆಗೆ ಸೈಕಲ್ ಜಾಥಾ ಮಾಡುತ್ತಿದ್ದಾರೆ. ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ಕಾರ್ಯ ಮಾಡುತ್ತಿದ್ದಾರೆ, ನಿತ್ಯ 20 ರಿಂದ 30 ಕಿ,ಮೀ ದೂರ ಸೈಕಲ್‌ನಲ್ಲಿ ಪ್ರಯಾಣ ಮಾಡುತ್ತಾರೆ. ಮಾರ್ಗದ ಮಧ್ಯದಲ್ಲಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳಿಗೆ ಸೈಕಲ್ ಬಳಕೆ ಮತ್ತು ಗಿಡಗಳನ್ನು ಬೆಳೆಸುವ ಬಗ್ಗೆ ಮಾಹಿತಿ ನೀಡುತ್ತಾರೆ.  ಎಚ್‌ಐವಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೆಹಲಿವರೆಗೆ ಸೈಕಲ್ ಜಾಥ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 10ಕ್ಕೂ ಹೆಚ್ಚು ಬಾರಿ ದೇಶದ ವಿವಿಧ ನಗರಗಳಿಗೆ ಸೈಕಲ್ ಜಾಥಾ ಮಾಡಿರುವುದಾಗಿ ಅವರು ಹೇಳಿದರು.    ಪ್ರತಿ ಮನೆ ಮುಂದೆ ಒಂದು ಗಿಡ ಬೆಳೆಸಬೇಕು, ಸೈಕಲ್ ಹೆಚ್ಚು ಬಳಕೆ ಮಾಡುವ ಮೂಲಕ ಇಂದನ ಉಳಿಸಬೇಕು ಹಾಗೂ ಪರಿಸರವನ್ನು ಎಲ್ಲರು ಕಾಪಡಬೇಕು ಎನ್ನುತ್ತಾರೆ ಉಮಾಪತಿ.  ಪಟ್ಟಣದ ಬಾಲಿಕ ಪ್ರೌಢ ಶಾಲೆಯಲ್ಲಿ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಜಿ.ವರಲಕ್ಷ್ಮಿ , ಸಹ ಶಿಕ್ಷಕರು ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 2

  Frustrated
 • 0

  Angry