`ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ'

7

`ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ'

Published:
Updated:

ಕನಕಪುರ: `ವಿದ್ಯಾವಂತರೇ ಪರಿಸರವನ್ನು ಹಾಳುಗೆಡವುತ್ತಿರುವುದು ವಿಷಾದನೀಯ' ಎಂದು ಬೆಂಗಳೂರು ರಾಮಕೃಷ್ಣಮಠದ ಸೌಖ್ಯನಂದ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬಿಳಗನಕುಪ್ಪೆ ಗ್ರಾಮದಲ್ಲಿ ಗೌಡರ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.`ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡಲಾಗುತ್ತಿದೆ' ಎಂದು ಅವರು ತಿಳಿಸಿದರು.`ಪ್ರಕೃತಿ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಮನೆಯ ಮುಂದೆ ಪ್ರತಿಯೊಬ್ಬರು ಒಂದೊಂದು ಸಸಿಗಳನ್ನು ನೆಡಬೇಕೆಂಬ ಉದ್ದೇಶದಿಂದ ಉಚಿತವಾಗಿ ಸಸಿಗಳನ್ನು ವಿತರಿಸಲಾಗುತ್ತಿದೆ' ಎಂದು ಅವರು ತಿಳಿಸಿದರು.ಇದೇ ಸಂದರ್ಭದಲ್ಲಿ ಕಸ ಸಂಗ್ರಹಣೆಗಾಗಿ ಶಾಲೆಗಳಿಗೆ ಕಸ ಸಂಗ್ರಹಣಾ ಡಬ್ಬಗಳನ್ನು ಕೊಡುಗೆ ನೀಡಿದ ಟೊಯೊಟ ಸಂಸ್ಥೆ ಕಾರ್ಮಿಕ ಸಂಘದ ಅರವಿಂದ್‌ಸಿಂಗ್ ಮಾತನಾಡಿ, ಟೊಯೊಟ ಸಂಸ್ಥೆ ಪರಿಸರ ಉಳಿಸಲು ಮತ್ತು ನೈರ್ಮಲ್ಯತೆ ಕಾಪಾಡಲು ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಗೌಡರ ಪ್ರತಿಷ್ಠಾನವು ಪರಿಸರ ಉಳಿಸುವ ಹೋರಾಟ ಕೈಗೊಂಡು ಅದಕ್ಕೆ ಉತ್ತೇಜನ ನೀಡಲು ಸಂಸ್ಥೆಯು ಪ್ರತಿಯೊಂದು ಶಾಲೆಗೂ ಎರಡು ಕಸ ಸಂಗ್ರಹ ಡಬ್ಬವನ್ನು ಕೊಡುಗೆ ನೀಡಿತ್ತು ಪ್ರತಿಷ್ಠಾನವು ಮುಂದೆ ಮಾಡುವ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.ಗೌಡರ ಪ್ರತಿಷ್ಠಾನದ ಎಚ್.ಬಿ.ಚಂದ್ರಶೇಖರ್ ಮಾತನಾಡಿ, `ಇದೊಂದು ಸ್ವಯಂ ಸೇವಾ ಸಂಸ್ಥೆ, ಎಲ್ಲಾ ವಿದ್ಯಾವಂತ ಯುವಕರು ಹಾಗೂ ಉದ್ಯೋಗಿಗಳು ಸೇರಿಕೊಂಡು ತಾವು ದುಡಿದ ಹಣದ ಸ್ವಲ್ಪ ಹಣವನ್ನು ಪ್ರತಿಷ್ಠಾನದಲ್ಲಿ ವಿನಿಯೋಗಿಸಿ, ಪರಿಸರ ಉಳಿಸುವ ಕಾರ್ಯಕ್ರಮ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಮುದಾಯದವರ ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರ ನೀಡುವುದು ಪ್ರತಿಷ್ಠಾನ ಮುಖ್ಯ ಉದ್ದೇಶವಾಗಿದೆ. ಸಮುದಾಯದವರು ಈ ಒಂದು ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು' ಎಂದು ಮನವಿ ಮಾಡಿದರು.ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಭೀಮೇಗೌಡ, ಅಧ್ಯಕ್ಷ ಎನ್.ರವಿಕುಮಾರ್, ನಿರ್ದೇಶಕರಾದ ಎಚ್.ಕೆ.ಧನಂಜಯ, ಎ.ಎಂ.ಆನಂದ್, ರಾಜಶೇಖರ್, ನಾಗೇಂದ್ರ, ಎಚ್.ಕೆ.ವರದರಾಜು, ರಾಜಶೇಖರ್, ಬಿ.ಗಜೇಂದ್ರ, ದಿನೇಶ್, ಕೆ.ಪಿ.ನಾಗೇಶ್, ಮುಖಂಡರಾದ ಚಿಕ್ಕಸಾದೇನಹಳ್ಳಿ ಈಶ್ವರ್, ಪಿ.ಜೆ.ಸತೀಶ್, ಬಿ.ರಾಜು, ಮಲ್ಲಪ್ಪ, ಕೆಂಪಣ್ಣ, ಕೆ.ವಿ.ಪುಟ್ಟರಾಜು, ಶಿವಣ್ಣ, ಕೆಂಪಣ್ಣ, ಶ್ರೀಕಾಂತ್, ರಾಮು, ಬಿ.ಎಂ. ರವಿ, ಬಿ.ಸಿ.ರವಿಕುಮಾರ್, ಮಾದೇಗೌಡ, ಬಿ.ಟಿ.ರಾಜು, ಬಿ.ಎಂ.ಬಸವರಾಜು, ಬಿ.ಟಿ.ಲೋಕೇಶ್, ಲಿಂಗರಾಜು, ಬಿ.ಸಿ.ಶಿವಣ್ಣ, ಬಿ.ಎಸ್.ಮಾದೇಗೌಡ, ಬಿ.ಚಂದ್ರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry