ಭಾನುವಾರ, ಅಕ್ಟೋಬರ್ 20, 2019
27 °C

ಪರಿಸರ ಸಂರಕ್ಷಣೆ: ಅರಿವಿಗೆ ಕ್ರಮ

Published:
Updated:

ಬೆಂಗಳೂರು: ಮಕ್ಕಳಲ್ಲಿ ಮಳೆ ನೀರು ಸಂಗ್ರಹ, ಪರಿಸರ ಸಂರಕ್ಷಣೆ ಹಾಗೂ ನಗರ ಕೃಷಿಯ ಕುರಿತಂತೆ ಆಸಕ್ತಿ ಬೆಳೆಸಲು ಭಾರತೀಯ ಜೀವವೈವಿಧ್ಯ ಸಂರಕ್ಷಣಾ ಸಂಸ್ಥೆ ಮುಂದಾಗಿದೆ.ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಹರಿಹರನ್, `ಯಲಹಂಕ ಬಳಿಯ ಸಂಸ್ಥೆಯ ಆವರಣದಲ್ಲಿ ಮಳೆ ನೀರು ಸಂಗ್ರಹ, ವಾತಾವರಣದ ತೇವಾಂಶದಿಂದ ನೀರು ಸಂಗ್ರಹಣೆ, ಸೋಲಾರ್ ಗ್ಯಾಜೆಟ್‌ಗಳ ಬಳಕೆ, ನೀರಿನ ಪುನರ್ಬಳಕೆ ಕುರಿತಂತೆ ಮಕ್ಕಳು ಹಾಗೂ ವಯಸ್ಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಪ್ರತಿ ಶನಿವಾರಗಳಂದು ನಡೆಸಲಾಗುತ್ತದೆ ಎಂದರು.ಕಳೆದ ವರ್ಷ ಡಿಸೆಂಬರ್ 10 ರಂದು ಉದ್ಘಾಟನೆಗೊಂಡ ಝೆಡ್ ಹಸಿರು ಉತ್ಸವಕ್ಕೆ ಉತ್ತಮವಾದ ಪ್ರತಿಕ್ರಿಯೆ ಬರುತ್ತಿದೆ ಎಂದು ತಿಳಿಸಿದರು.

 

ನಗರ ಪ್ರದೇಶಗಳ ಮಿತ ಸ್ಥಳಾವಕಾಶದಲ್ಲಿ ತರಕಾರಿ, ಸೊಪ್ಪು ಸೇರಿದಂತೆ ಹಣ್ಣಿನ ಬೆಳೆಗಳನ್ನು ಬೆಳೆಯುವ ಬಗ್ಗೆಯೂ ಇಲ್ಲಿ ತಿಳುವಳಿಕೆ ನೀಡಲಾಗುವುದು~ ಎಂದರು.`ಪರಿಸರ ಕಾಳಜಿ ಕಡಿಮೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸುವ ಅಗತ್ಯವಿದೆ.

Post Comments (+)